ಮಾವು ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ
ಹಾಸನ: ಜಿಲ್ಲೆಯ ಮಾವು ಬೆಳೆಗಾರರ ಸಂಘವು ಇತ್ತೀಚೆಗೆ ಜಿಲ್ಲಾ ತೋಟಗಾರಿಕಾ ಇಲಾಖೆಯ ಕಚೇರಿ ಆವರಣದಲ್ಲಿ ಸಂಘದ ಕಾರ್ಯಕಾರಿ ಮಂಡಳಿ ತನ್ನ ಮೊದಲ ಸಭೆ ನಡೆಸಿತು. ಸಂಘದ ಅಧ್ಯಕ್ಷ ಎಚ್.ಪಿ. ಮೋಹನ್ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಆರ್.ಎಸ್. ಗುರುಸ್ವಾಮಿಗೌಡ, ಖಜಾಂಚಿ ಪಿ. ಪ್ರಸಾದ್ ಮತ್ತು ಸಹಕಾರ್ಯದರ್ಶಿ ಎಚ್.ಎಸ್. ರಮೇಶ್ ಹಾಗೂ ಸಂಘದ ಪದಾಧಿಕಾರಿಗಳನ್ನು ಒಳಗೊಂಡು ಜಿಲ್ಲೆಯ ಮಾವು ಕೃಷಿ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಮಾವು ಜಿಗಿ ಹುಳ, ಬೂದಿ ರೋಗ ನಿಯಂತ್ರಣ ಮತ್ತು ಹಣ್ಣು ನೊಣ ಬಾಧೆ ನಿಯಂತ್ರಿಸಲು ಫೆರಮೋನ್ ಆಕರ್ಷಕ ಬಲೆಗಳನ್ನು ಉಪಯೋಗಿಸುವ ಬಗ್ಗೆ ಮತಾತು ಮಾವು ಕಾಂಡ ಕೊರಕದ ನಿಯಂತ್ರಣದ ಬಗ್ಗೆ ಚರ್ಚಿಸಲಾಯಿತು. ಸಂಘದ ಮೂಲಕ ಖರೀದಿಸಲು ಅವಕಾಶ ಇರುವುದನ್ನು ಪ್ರಸ್ತಾಪಿಸಲಾಯಿತು. ಮಾಹಿತಿಗೆ ಮೊ. 98455-81710, 96327-96273.