ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸೇವಾ ಮನೋಭಾವದಿಂದ ದೇಶಕ್ಕೆ ಕೊಡುಗೆ ನೀಡಿ'

Rashmi Kasaragodu
Updated On : 2 Mar 2014, 1:32 am

ಹಾಸನ: ಇಂದಿನ ಯುವಪೀಳಿಗೆ ಬೇಡನ್ ಪಾವೆಲ್ ಅವರ ಹಾದಿಯಲ್ಲಿ ನಡೆದು ಸೇವಾಮನೋಭಾವದ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹಾಸನ ಲೋಕಾಯುಕ್ತ ಎಸ್ಪಿ ಡಾ. ವೇದ ಮೂರ್ತಿ ಹೇಳಿದರು.  ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋವರ್ಸ್ ಮತ್ತು ರೇಜರ್ಸ್ ಮೂಟ್ ಸಮಾಗಮ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ  ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಶಿಸ್ತು, ಸಂಯಮ ಬೆಳೆಯುತ್ತದೆ ಎಂದರು.
ಆರೋಗ್ಯಕ್ಕೆ ಸಹಕಾರಿ: ಮಕ್ಕಳು ದೇಶದ ಉತ್ತಮ ಪ್ರಜೆಯಾಗಿ ಮೂಡಿಬರಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಣ ಬಹಳಷ್ಟು ಸಹಕಾರಿ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನು ತೊಡಗಿಸಿಕೊಳ್ಳುವುದರಿಂದ ಜ್ಞಾನವಿಕಾಸ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಮಾತನಾಡಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಣ ಎಲ್ಲಾ ಮಕ್ಕಳಿಗೂ ದೊರಕುವಂತಾಗಬೇಕು. ಸಂಸ್ಥೆಗೆ ನಗರಸಭೆಯಿಂದ ಆಗುವಂತಹ ಅನುಕೂಲಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಮಗೆ ಮಾದರಿಯಾಗಲಿ: ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವು ನಗುವುದನ್ನೇ ಮರೆತಿದ್ದೇವೆ, ಕಲ್ಮಶವಿಲ್ಲದ ಮಕ್ಕಳ ಮುಗ್ದ ನಗು ನಮಗೆ ಮಾದರಿಯಾಗಬೇಕು ಎಂದರು.ಸ್ಕೌಟ್ಸ್ ಅಂಡ್ಗೈಡ್ಸ್ಸ್ಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಗರದ ಪ್ರಮುಖರಸ್ತೆಗಳಲ್ಲಿ 350ಕ್ಕೂ ಹೆಚ್ಚು ಪಥಸಂಚಲನ ನಡೆಸಿದರು. ನಂತರ ಮಕ್ಕಳಿಗೆ ಚಿತ್ರಕಲೆ, ಧ್ವಜಸ್ಥಂಭ ನಿರ್ಮಾಣ, ಬೆಂಕಿಯಿಲ್ಲದೆ ಅಡುಗೆಮಾಡುವುದು ಮುಂತಾದ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಗೈಡ್ಸ್ ಆಯುಕ್ತೆ ಜಯರಮೆಶ್, ಬೋರೆಗೌಡ, ಜಯಣ್ಣ, ಯೋಗೇಶ್, ಜಿಲ್ಲಾ ಸಂಘಟಕ ದೆವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement