ಹಾಸನ ನಾಟಿ ಸೌತೆಕಾಯಿಗೆ ಬೇಡಿಕೆ
ಪಿ. ರವಿಕುಮಾರ್
ಹಾಸನ: ಬಾಯಾರಿಕೆಗೆ ಎಷ್ಟೇ ನೀರು ಕುಡಿದರೂ ನೀರಣಿಕೆ ಸಾಧ್ಯವಾಗದೆ ಸೌತೆಕಾಯಿ ಮೊರೆ ಹೋಗುತ್ತಿದ್ದ ಜನರು ಹಾಸನ ನಾಟಿ ಸೌತೆಕಾಯಿಯ ಬೆಲೆ ಕೇಳಿ ಅಬ್ಬಬ್ಬಾ.... ಅಂತ ಸೌತೆಕಾಯಿಯನ್ನು ಖರೀದಿಸಲು ಇಂದುಮುಂದು ನೋಡಿ ವಾಪಸ್ ತೆರಳುವಂತಾಗಿದೆ.
ನಗರ, ಪಟ್ಟಣ ಹಾಗೂ ಪ್ರವಾಸಿ ತಾಣಗಳಲ್ಲಿ ಮಾರಟ ಮಾಡುವಂತಹ ಹಾಸನದ ನಾಟಿ ಸೌತೆಕಾಯಿಮೊಂದಕ್ಕೆ ಬರೋಬ್ಬರಿ 20 ರು.ನಂತೆ ಮಾರಾಟವಾಗುತ್ತಿದ್ದು, ಪ್ರವಾಸಿಗರು ವಿಧಿ ಇಲ್ಲದೆ ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಅಧಿಕ ಬೆಲೆ ನೀಡಿ ಸೌತೆಕಾಯಿ ಖರೀದಿಸಿದರೆ, ಸ್ಥಳೀಯರು ಸೌತೆಕಾಯಿ ಬೆಲೆ ಕೇಳಿ ಸ್ಥಳದಲ್ಲಿ ನಿಲ್ಲದೆ ಬೇಡಪ್ಪಾ ಅಂತ ಹೋಗುತ್ತಿದ್ದಾರೆ.
ರಾಜ್ಯದಲ್ಲಿಯೇ ಫೇಮಸ್: ಬೇಸಿಕೆ ಹೆಚ್ಚಾಗಿ ಬಾಯಾರಿಕೆಯನ್ನು ನೀಗಿಸಬಲ್ಲ ಹಾಸನದ ನಾಟಿ ಸೌತೆಕಾಯಿ ರಾಜ್ಯದಲ್ಲಿಯೇ ಫೇಮಸ್ ಆಗಿದೆ. ಆದ್ರೆ ಸೌತೆಕಾಯಿಯೊಂದರ ಬೆಲೆ ಹೆಚ್ಚಾಗಿರೋದು ಮಾತ್ರ ಸೌತೆಕಾಯಿ ಪ್ರಿಯರಲ್ಲಿ ಕಣ್ಣೀರು ತರಿಸಿದೆ. ಹಾಸನದ ನಾಟಿ ಸೌತೆಕಾಯಿಯನ್ನು ಬೇಡ ಅನ್ನೋರೆ ಇರಲಿಲ್ಲ. ವಿಪರ್ಯಾಸ ಆಂದ್ರೆ... ಸೌತೆಕಾಯಿಯೊಂದರ ಬೆಲೆ 20 ಆಗಿರೋದ್ದರಿಂದ ಬೆಲೆ ಕೆಳಿ ಗ್ರಾಹಕರು ಬೇಡ ಅಂತ ಮುಂದೊಗುವಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸೌತೆಕಾಯಿ ವ್ಯಾಪಾರಸ್ಥರು ತಲೆ ಮೇಲೆ ಕೈ ಇಟ್ಟು ಕುಳುತುಕೊಳ್ಳುವಂತಾಗಿದೆ.
ಬೆಲೆಯಲ್ಲಿ ಏರಿಕೆ: ಕೆಲ ದಿನಗಳ ಇಂದಷ್ಟೇ ಸೌತೆಕಾಯಿಯೊಂದಕ್ಕೆ ಬೆಲೆ 10ರಿಂದ 12 ಇದ್ದು, ಸೌತೆಕಾಯಿಯ ಚೀಲಮೊಂದಕ್ಕೆ 600 ನಿಂದ 700 ಇತ್ತು. ಆದರೆ ಪ್ರಸ್ತುತ ಸೌತೆಕಾಯಿಯ ಚೀಲಮೊಂದರ ದರ ಸಾವಿರ ದಾಟಿರುವುದಿರಿಂದ ಸಹಜವಾಗಿ ಬೆಲೆಯಲ್ಲಿ ಏರಿಕೆ ಕಂಡಿದೆ.
ಕಂಗಾಲಾದ ಸಾರ್ವಜನಿಕರು: ತಾಲೂಕಿನ ಸಂಕನೇಹಳ್ಳಿ, ಹನುಮಂತಪುರ, ಬಡಕೇನಹಳ್ಳಿ, ಉದ್ದೂರು, ಸಾಲಗಾಮೆ, ಕಟ್ಟಾಯ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಹೆಚ್ಚಾಗಿ ಸೌತೆಕಾಯಿಯನ್ನು ಬೆಳೆಯಲಾಗುತ್ತಿತ್ತು. ಆದರೆ ನೀರಿನ ಅಭಾವ ಹಾಗೂ ಅಂತರ್ಜಲ ಬತ್ತಿ ಹೋಗಿರುವುದರಿಂದ ಸೌತೆಕಾಯಿ ಇಳುವರಿ ಕ್ಷಿಣಿಸಿದೆ. ಇದರಿಂದ ಸೌತೆಕಾಯಿ ಬೆಲೆ ಗಗನಕ್ಕೇರಿದೆ. ನೀರಿನ ಅಭಾವದಿಂದ ಬೆಳೆದಂತಹ ಅಷ್ಟೋ ಇಷ್ಟೋ ಸೌತೆಕಾಯಿಯ ಬೆಲೆ ಏರಿಕೆಯಿಂದ ಕೊಳ್ಳುವವರು, ರೈತರು ಹಾಗೂ ಮಾರಾಟಗಾರರು ಕಂಗಾಲಾಗಿದ್ದಾರೆ.
ಬೇಸಿಗೆ ಪ್ರಾರಂಭವಾಗುವ ಮುನ್ನವೆ ಬೆಳೆಗಳಿಗೆ ನೀರಿನ ಅಭಾವದ ಬಿಸಿ ಸೌತೆಕಾಯಿ ಮೇಲೆ ತಟ್ಟಿದೆ. ಜಿಲ್ಲೆಯ ನಾಟಿ ಸೌತೆಕಾಯಿಗೆ ಬೆಂಗಳೂರು, ಮೈಸೂರು, ಮಂಗಳೂರು, ಮಂಡ್ಯ, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆ, ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಉತ್ತಮವಾದ ಬೇಡಿಕೆ ಇದೆ. ವಿಪರ್ಯಾಸ ಅಂದ್ರೆ ಸೌತೆಕಾಯಿ ಇಳುವರಿ ಕಡಿಮೆ ಆಗಿರೋದ್ರಿಂದ ಇತರೆ ಜಿಲ್ಲೆಗಳಿಗೆ ಸೌತೆಕಾಯಿ ರಫ್ತಿನಲ್ಲಿ ಇಳಿಮುಖ ಕಂಡಿದೆ.
ನಾಟಿ ಸೌತೆಕಾಯಿಯ ಬೆಲೆ 20 ಆಗಿದೆ. ಕೆಲ ದಿನದ ಹಿಂದೆ 10ರಿಂದ 13 ಇತ್ತು. ಈಗ ಬೆಲೆ ಏರಿಕೆಯಾಗಿರುವುದರಿಂದ ಜನರು ಸೌತೆಕಾಯಿಯನ್ನು ಕೊಂಡುಕೊಳ್ಳುತ್ತಿಲ್ಲ. ಇದರಿಂದ ಸೌತೆಕಾಯಿಗೆ ಬಂಡವಾಳ ಹಾಕಿ, ನಷ್ಟ ಉಂಟಾಗುತ್ತಿದೆ. ಒಂದಕ್ಕೆ 20 ರೂಪಾಯಿ ಅಂತಿದ್ದಂಗೆ ಬೇಡು ಅಂತ ಹೋಗುತ್ತಿದ್ದಾರೆ.
ಟಿ ಸಾವಿತ್ರಿ, ಸೌತೆಕಾಯಿ ವ್ಯಾಪಾರಿ
ನೋಡಿ ಸಾರ್ ಸೌತೆಕಾಯಿ ಚೀಲಮೊಂದಕ್ಕೆ 1 ಸಾವಿರ ಆಗಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಈ ಹಿಂದೆ ಚೀಲಕ್ಕೆ 600ರಿಂದ 700 ರು. ಇತ್ತು ಜನರು ಬೆಲೆ ಕೇಳಿ ನಿಲ್ಲದೆ ಹೋಗುತ್ತಿದ್ದಾರೆ. ಇದರಿಂದ ವ್ಯಾಪಾರ ಇಲ್ಲದಂತಾಗಿದೆ. ರೈತರಿಂದ ನಾವು ತಂದು ಮಾರೋದು ಸಾಧ್ಯವಾಗದಂತಾಗಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ವ್ಯಾಪಾರಸ್ಥರಿಗೆ ನಷ್ಟವಾಗಿದೆ.
ಟಿ ಕುಮಾರ್, ಸೌತೆಕಾಯಿ ವ್ಯಪಾರಿ