ಆಂಗ್ಲ ಶಿಕ್ಷಕರ ಕಾರ್ಯಾಗಾರ
ಬೇಲೂರು: ಇಲ್ಲಿನ ಯಮಸಂಧಿ ದೇವೇಗೌಡ ಮತ್ತು ದ್ಯಾವಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಹಾಸನ ಜಿಲ್ಲಾ ಗ್ರಾಮಿಣ ಇಂಗ್ಲಿಷ್ ಶಿಕ್ಷಕರ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರಿಯ ವಿಶ್ವವಿದ್ಯಾಲಯ ಗುಲ್ಬರ್ಗ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಡೋಣೂರ ಹಾಗೂ ಜಿಲ್ಲೆಯ ಶಿಕ್ಷಣ ತಜ್ಞ ಡಾ.ಐ.ಎಂ.ಮೋಹನ ಕಾರ್ಯಕ್ರಮ ಉದ್ಘಾಟಿಸಿದರು.
ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪರಿಮಳಾ ಕಮತರ ಹಾಗೂ ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಕಾಶ ಭಾಗವಹಿಸಿದ್ದರು. ಡಾ.ರಾಜಶೇಖರ ಮಠಪತಿ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಿ.ಎಸ್.ರಾಜು, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಜಯಣ್ಣಗೌಡ, ಸತೀಶ, ಕಾಲೇಜು ಅಭಿವೃದ್ಧಿ ಸಂಸ್ಥೆ ಸದಸ್ಯರಾದ ವಿಕ್ರಮ ಕೌರಿ, ಸ.ರಂ.ಈರೇಗೌಡ ಮತ್ತು ಕೌಸರ್ ಇದ್ದರು.