ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಧನಾತ್ಮಕ ಚಿಂತನೆಯಿಂದ ವ್ಯಕ್ತಿತ್ವ ವೃದ್ಧಿ'

Mainashree
Updated On : 2 Mar 2014, 10:22 am

ಹಾಸನ: ಮನುಷ್ಯನ ಋಣಾತ್ಮಕ ಚಿಂತನೆಗಳು ವ್ಯಕ್ತಿತ್ವ ಕುಗ್ಗಿಸುತ್ತವೆ ಮತ್ತು ಧನಾತ್ಮಕ ಚಿಂತನೆಗಳು ಅವನ ವಿಕಾಸಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಮನುಷ್ಯನು ಧನಾತ್ಮಕವಾಗಿ ಚಿಂತನೆ ಮಾಡಬೇಕು ಎಂದು ಆಧ್ಯಾತ್ಮಿಕ ಮತ್ತು ಸಮ್ಮೋಹನ ಚಿಕಿತ್ಸಕ ಜಿ.ಎಸ್. ವೇಣು ಕಿವಿಮಾತು ಹೇಳಿದರು.
ನಗರದ ಸ್ಪಂದನ ವೇದಿಕೆ ಮತ್ತು ವೇದಭಾರತಿ ಸಂಸ್ಥೆಗಳ ಸಹಯೋಗದಲ್ಲಿ  ಎಂ.ಕೃಷ್ಣ ಅಂಧಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಿವರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನಂತರ ಆಯ್ದ ಅಂಧ ಮಕ್ಕಳನ್ನು ಸಮ್ಮೋಹನಕ್ಕೆ ಒಳಪಡಿಸಿ ಅವರಲ್ಲಿನ ದಿವ್ಯ ಚಕ್ಷು ಕ್ರಿಯಾಶೀಲಗೊಳಿಸಿ ತನ್ಮೂಲಕ ಅಂಧ ಮಕ್ಕಳೂ ತಮ್ಮ ಮಿದುಳಿನ ತರಂಗಗಳ ಮೂಲಕ ವಸ್ತುವನ್ನು ಗುರುತಿಸಬಲ್ಲ ಸಾಮರ್ಥ್ಯ ಪಡೆಯುವ ಚಿಕಿತ್ಸೆ ಕೊಡಲು ತಮ್ಮ ಪೂರ್ಣ ಆಧ್ಯಾತ್ಮಿಕ ವಿದ್ಯೆ ವಿನಿಯೋಗಿಸುವುದಾಗಿ ಹೇಳಿದರು.
ಶಾಲೆ ಅಧ್ಯಕ್ಷ ಡಾ.ನಾಗರಾಜ್, ಕೆ.ಪಿ.ಸತ್ಯಪ್ರಮೋದ್, ವೇದಭಾರತಿಯ ಸಂಯೋಜಕ ಹರಿಹರಪುರ ಶ್ರೀಧರ್, ಸ್ಪಂದನ ವೇದಿಕೆ ಅಧ್ಯಕ್ಷೆ ಕಲಾವತಿ, ಪ್ರೇಮ  ಕೋಮಲಾ, ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement