ನಾಲಾ ನಿರ್ಮಾಣಕ್ಕೆ ಶಂಕುಸ್ಥಾಪನೆ
ಹಾಸನ: ಸಂಸದ ಎಚ್.ಡಿ. ದೇವೇಗೌಡರು ಮಾ.3 ರಂದು ಬೆಳಗ್ಗೆ 12.15 ಕ್ಕೆ ಹಾಸನ ತಾಲೂಕಿನ ಮರ್ಕುಲಿ ಗ್ರಾಮದಲ್ಲಿ ಯಗಚಿ ಎಡದಂಡೆ ನಾಲೆಯ ಕಾಮಸಮುದ್ರ ಶಾಖಾ ಕಾಲುವೆಯ ಸರಪಳಿ 5.0 ಕಿ.ಮೀ ಯಿಂದ 35.00ಕಿ.ಮೀ ವರೆಗಿನ ನಾಲಾ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.
ಜಲ ಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾಗವಹಿಸುವರು. ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಚ್.ಎಸ್.ಪ್ರಕಾಶ್, ಪಟೇಲ್ ಶಿವರಾಂ, ಮರಿತಿಬ್ಬೇಗೌಡ, ಬಿ.ಬಿ.ಶಿವಪ್ಪ, ಗೋ.ಮಧುಸೂಧನ್ ಮತ್ತಿತರರು ಭಾಗವಹಿಸುವರು.
ಆಡಿಟೋರಿಯಂ ಉದ್ಘಾಟನೆ: ಎಚ್.ಡಿ.ದೇವೇಗೌಡರು ಮಾ.3 ರಂದು ಮಧ್ಯಾಹ್ನ 2 ಕ್ಕೆ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಉದ್ಘಾಟನೆ ನೆರವೇರಿಸುವರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.