ಮೆಕ್ಕೆಜೋಳ ಖರೀದಿ ಮುಂದುವರಿಕೆ: ಸಚಿವ
ಹಾಸನ: ನಗರದಲ್ಲಿ ಮೆಕ್ಕೆ ಜೋಳ ಖರೀದಿ ಕೇಂದ್ರದ ಅವಧಿಯನ್ನು ಮುಂದುವರಿಸಲಾಗುವುದು ಎಂದು ಕೃಷಿ ಮತ್ತು ಮಾರುಕಟ್ಟೆ ಸಚಿವರು ತಿಳಿಸಿದ್ದಾರೆ.
2013-14ನೇ ಸಾಲಿನ ಕನಿಷ್ಠ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಈ ಹಿಂದೆ ಇದ್ದ ಖರೀದಿ ಮಿತಿಯನ್ನು ಹಿಂಪಡೆದು, 2013-14 ನೇ ಮುಂಗಾರು ಋತುವಿನ ಮೆಕ್ಕೆಜೋಳ ಖರೀದಿ ಅವಧಿಯನ್ನು ದಿನಾಂಕ 28-2-2014ಕ್ಕೆ ಅಂತ್ಯಗೊಳಿಸಲು ಸರ್ಕಾರಿ ಆದೇಶದಲ್ಲಿ ತಿಳಿಸಿದ್ದು, ಆದರೆ ವಾಸ್ತವವಾಗಿ ಮೆಕ್ಕೆ ಜೋಳ ಈಗ ಕಟಾವಿಗೆ ಬಂದಿದ್ದು ಇನ್ನು ಮುಂದೆ ಮಾರಾಟ ಮಾಡುವ ಸಮಯವಾಗಿರುವುದರಿಂದ, ಈ ಸಮಯದಲ್ಲಿ ಸರ್ಕಾರ ಖರೀದಿ ಸ್ಥಗಿತಗೊಳಿಸಿದಲ್ಲಿ ರೈತರ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗದೆ ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ರುವುದರಿಂದ ಮೆಕ್ಕೆ ಜೋಳ ಖರೀದಿ ಅವಧಿಯನ್ನು ಮುಂದುವರೆಸುವಂತೆ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಪಟೇಲ್ ಶಿವರಾಂ ಒತ್ತಾಯಿಸಿರುವುದನ್ನು ಸಚಿವರು ಒಪ್ಪಿ, ಮೆಕ್ಕೆಜೋಳ ಖರೀದಿ ಅವಧಿ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.