'ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿ'
ಜಾವಗಲ್: ಹಣ ಕೂಡಿಟ್ಟು ಅನ್ಯರ ಪಾಲು ಮಾಡುವುದಕ್ಕಿಂತ ಕನ್ನಡ ಶಾಲೆಗಳನ್ನು ತೆರೆಯಲು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ದಾನ ಮಾಡಿ ಅದು ಶ್ರೇಷ್ಠಧರ್ಮ ಎಂದು ನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ.
ಜಾವಗಲ್ನ ಷಾ ಖಲಂದರ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಹೋದರತ್ವ ಭಾವನೆ ಬೆಳೆಸಬೇಕಾಗಿದೆ. ಶಿಕ್ಷಣ ಸಂಸ್ಥೆಯು ಜಾತಿ, ಲಿಂಗ ಭೇಧ ಭಾವನೆ ದೂರಮಾಡಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕೆಂದರು.
ಮಾತ್ರವಲ್ಲ, ತಾಯಂದಿರು ಮಕ್ಕಳನ್ನು ಪ್ರತಿ ಹಂತದಲ್ಲೂ ಉತ್ತೇಜಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕೆಂದರು. ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಆರ್.ವಿ ಗಂಗಾಧರಪ್ಪ ಮಾತನಾಡಿ, ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆಯಾದರೂ ಮಕ್ಕಳ ಭವಿಷ್ಯ ಶಾಲೆಯಲ್ಲಿ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ಪಿಎಸ್ಐ ನವೀನ್, ನವೀದ್ಸೇಟ್, ಮಹಮ್ಮದ್ ಅನ್ಸರ್, ಮಹಮ್ಮದ್ ಸಮಿಲ್, ಎಸ್ಬಿಎಂ ಶಾಖಾಧಿಕಾರಿ ಕಲೀಂದ್ರ ಕುಮಾರ್ ಮತ್ತಿತರರು ಇದ್ದರು.