ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರೀಸಾಮಾನ್ಯಗೆ ಆದ್ಯತೆ; ಕುವೆಂಪು ಪ್ರಥಮರು

Mainashree
Updated On : 2 Mar 2014, 10:17 am

ಅರಸೀಕೆರೆ: ಈ ದೇಶದ ಬೆನ್ನೆಲುಬು ರೈತ, ಶ್ರೀಸಾಮಾನ್ಯ ಹಾಗೂ ಹೆಣ್ಣು ಎಂಬ ಪ್ರಮುಖ ಅಂಶಗಳನ್ನು ಆಯ್ಕೆ ಮಾಡಿಕೊಂಡು ಕೃತಿ ರಚನೆ ಮಾಡಿದ ಶ್ರೇಷ್ಠ ಕವಿಗಳಲ್ಲಿ ರಾಷ್ಟ್ರಕವಿ ಕುವೆಂಪು ಮೊದಲಿಗರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅದ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಕನ್ನಡ ವೇದಿಕೆ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಕನ್ನಡ ಸಾಹಿತ್ಯದಲ್ಲಿ ತಮ್ಮ ಅದ್ಭುತ ಕಲ್ಪನೆಗಳ ಮೂಲಕ ಜನರ ಮನ ತಳಿಸಿ ಸಮಗ್ರ ಸಾಹಿತ್ಯ ದರ್ಶನ ಮಾಡಿಸಿದ ಕೀರ್ತಿ ಹೊಂದಿದ್ದಾರೆ. ನೇಗಿಲಯೋಗಿ, ಶ್ರೀಸಾಮಾನ್ಯ ಹಾಗೂ ಹೆಣ್ಣು ಈ ಆಂಶಗಳನ್ನು ಕುವೆಂಪುರವರು ತಮ್ಮ ಕೃತಿಗಳಲ್ಲಿ ಬಿಂಬಿಸುವ ಮೂಲಕ ಅನ್ನದಾತನಿಗೆ, ಸ್ತ್ರೀಯರಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಯಂತಹ ಕೃತಿಗಳಲ್ಲಿ ಕವಿ ಕುವೆಂಪು ಸಮಾಜಮುಖಿ ಹಾಗೂ ಜನಪರ ಚಿಂತನೆಗಳನ್ನಿಟ್ಟುಕೊಂಡು ಕೃತಿ ರಚನೆ ಮಾಡಿರುವುದನ್ನು ಗಮನಿಸಬಹುದಾಗಿದೆ. ವಿದ್ಯಾರ್ಥಿ ಸಮುದಾಯ ಅವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಬಹುದಾಗಿದೆ ಎಂದು ತಿಳಿಸಿದರು.ಪ್ರಾಂಶುಪಾಲ ಪ್ರೊ.ಸೈಯ್ಯದ್ ಪಾಷ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಚ್.ಪಿ.ಉಷಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement