ಸ್ವಪ್ರತಿಷ್ಠೆಯಿಂದ ಸಮಾಜ ಕಲುಷಿತ: ಶಾಸಕ ಮಂಜು
ರಾಮನಾಥಪುರ: ಪ್ರಸ್ತುತ ದಿನಗಳಲ್ಲಿ ಜನರಲ್ಲಿ ಅಂತರಿಕ ಕಿತ್ತಾಟ ಸಂಕುಚಿತ ಮನೋಭಾವ ಹಾಗೂ ಸ್ವಪ್ರತಿಷ್ಠೆ ಹೆಚ್ಚಾಗಿ ಸಮಾಜ ಕಲುಷಿತಗೊಳ್ಳುತ್ತಿದೆ. ಇದನ್ನು ತೊರೆದು ಜನತೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲು ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.
ರಾಮನಾಥಪುರ ಹೋಬಳಿ ಗಂಗೂರು-ರುದ್ರಪಟ್ಟಣ ಕ್ರಾಸ್ನಿಂದ ಹಾಸನ-ಮೈಸೂರು ಜಿಲ್ಲಾ ಗಡಿ ಕರತಾಳು ಗೇಟ್ವರೆಗೆ ರು. 3 ಕೋಟಿ 90 ಲಕ್ಷ ವೆಚ್ಚದಲ್ಲಿ 8. ಕಿಮೀ ದೂರದ ರಸ್ತೆಗೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಡಾಂಬರೀಕರಣ ಮಾಡುವ ಗುತ್ತಿಗೆದಾರರು ರಸ್ತೆ ಗುಣ ಮಟ್ಟದ ಕಾಪಾಡುವಂತೆ ಹೇಳಿದರು. ಅರಕಲಗೂಡು ತಾಲೂಕಿನ ಗಡಿ ಭಾಗದ ಗೊರೂರು ನದಿಯ ಹತ್ತಿರದಿಂದ ಅರಕಲಗೂಡು, ರಾಮನಾಥಪುರ, ಹಾಸನ ಜಿಲ್ಲಾ ಗಡಿ ಮಲ್ಲಾಪುರದವರೆಗೆ 34 ಕಿ.ಮೀ. ದೂರ 47 ಕೋಟಿ ರೂ ಮಂಜೂರಾಗಿದ್ದು ಈಗಾಗಲೇ 20 ಕೋಟಿ ರು ಮಂಜೂರಾಗಿದೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ತಾಪಂ ಮಾಜಿ ಸದಸ್ಯ ರಾಜೇಗೌಡ, ಎಪಿಎಂಸಿ ಮಾಜಿ ಸದಸ್ಯ ಕಂಬೇಗೌಡ, ಗುತ್ತಿಗೆದಾರ ನಾಗರಾಜ್, ಹೋಬಳಿ ಅಧ್ಯಕ್ಷ ಜಿ.ಸಿ.ಮಂಜೇಗೌಡ, ಮುಖಂಡ ಶಿರದನಹಳ್ಳಿ ಎಸ್.ಎಂ. ಮಲ್ಲೇಶ್ ಹಾಗೂ ಶಿವಣ್ಣ, ಕೇರಳಾಪುರ ಗ್ರಾಪಂ ಅಧ್ಯಕ್ಷ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.