ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರ್‌ಟಿಜಿಎಸ್ ಕಾಯ್ದೆಗೆ ವಿರೋಧ ಕೊಬ್ಬರಿ ಟೆಂಡರ್ ಪ್ರಕ್ರಿಯೆ ರದ್ದು

Vishwanath S
Updated On : 6 Mar 2014, 12:45 pm

ಅರಸೀಕೆರೆ: ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರಾಟ ನೀತಿ 2013 (ಆರ್.ಟಿ.ಜಿ.ಎಸ್.) ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕೊಬ್ಬರಿ ವರ್ತಕರು ಮಂಗಳವಾರ ಮತ್ತೊಮ್ಮೆ ಮಧ್ಯಾಹ್ನ ಟೆಂಡರ್ ಪ್ರಕ್ರಿಯೆಯನ್ನು ದಿಢೀರ್ ಸ್ಥಗಿತಗೊಳಿಸಿದರು. ಇದರಿಂದಾಗಿ ಕೊಬ್ಬರಿ ಮಾರಾಟಕ್ಕೆ ತಂದಿದ್ದ ರೈತರು ಕೆಲಕಾಲ ಆತಂಕದ ಕ್ಷಣ ಎದುರಿಸುವಂತಾಗಿತ್ತು.
ಸಮಸ್ಯೆಯ ಗಂಭೀರತೆಯನ್ನು ಅರಿತ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಸಭೆ ನಡೆಸಿ ವರ್ತಕರು ಹಾಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಪ್ರತಿ ಕ್ವಿಂಟಾಲ್ ಕೊಬ್ಬರಿಯನ್ನು ಟೆಂಡರ್ ಪ್ರಕ್ರಿಯೆ ನಡೆಸದೆ 8300-350 ರು.ಗೆ   ಕೊಳ್ಳುವುದಾಗಿ ಕೆಲ ವರ್ತಕರು ಖರೀದಿಸಲು ಮುಂದಾದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು.
ಅವೈಜ್ಞಾನಿಕ ನಿರ್ಧಾರ: ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕಾಯ್ದೆ ಮಾರಕವಾಗಿದೆ. ವರ್ತಕರು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡುವ ಕೆಲಸ ಮಾಡಬೇಕಿದೆ. ಇದರಿಂದಾಗಿ ದಲ್ಲಾಳಿಗಳು ವ್ಯಾಪಾರ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಳ್ಳಲಿದೆ. ಸರ್ಕಾರ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಎ.ಪಿ.ಎಂ.ಸಿ. ವರ್ತಕರ ಸಂಘದ ಅಧ್ಯಕ್ಷ ಗಂಜಿಗೆರೆ ಬಸವರಾಜ್ ಆಗ್ರಹಿಸಿದರು.
ಅವರೊಂದಿಗೆ ಗೊಲ್ಲರಹಳ್ಳಿ ಬಸವರಾಜು, ಎಸ್.ಬಿ.ಟಿ. ಬಾಬು, ಆನಂದ್, ಅಶೋಕ್ ಸೇರಿದಂತೆ ಇತರ ವರ್ತಕರು ದನಿಗೂಡಿಸಿದರು. ರಾಜ್ಯದ ಕೆಲವೆಡೆ ಅವಧಿಗೂ ಮುನ್ನವೇ ಪ್ರಕ್ರಿಯೆ ಆರಂಭಿಸಿರುವುದು ಸರಿಯೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಸೂಚನೆ: ಕಾರ್ಯಕರ್ತರ ಕುಂದು ಕೊರತೆ ಹಾಗೂ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪಟ್ಟಣಕ್ಕಾಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ರೈತರ ಸಮಸ್ಯೆ ಅರಿತು ತಕ್ಷಣವೇ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement