ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೈಸರ್ಗಿಕ ಸಂಪನ್ಮೂಲಗಳು ಮನುಕುಲಕ್ಕೆ ವರದಾನ

Vishwanath S
Updated On : 7 Mar 2014, 12:20 pm

ಬೇಲೂರು: ನಿಸರ್ಗ ನಿರ್ಮಿತ ಸಮಪನ್ಮೂಲಗಳಾದ ನೆಲ ಜಲ ಗಾಳಿ ಬೆಳಕು ಜಿವಜಂತುಗಳು, ಸಸ್ಯಸಂಪತ್ತು ಇಂಧನಮೂಲ ಇತ್ಯಾದಿಗಳು ಮನುಕುಲಕ್ಕೆ ವರಧಾನವಾಗಿದೆ. ಇವುಗಳನ್ನು ಸಂರಕ್ಷಿಸಬೇಕು ಎಂಬುವ ಅರಿವು ನಮ್ಮೇಲ್ಲರಿಗು ಬೇಕು ಎಂದು ಪರಿಸರ ಪ್ರೇಮಿ ಸುಬ್ಬರಾವ್ ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯ್ತಿ ಸದಸ್ಯರಿಗೆ ಮತ್ತು ಪಿಡಿಓಸ್ ಹಾಗೂ ಲೈನ್ ಅಧಿಕಾರಿ, ಕೃಷಿ, ಜಲಾನಯನ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಜೀವ ವೈವಿಧ್ಯ ಸಂರಕ್ಷಣೆ ಮತ್ತು ನಿರ್ವಹಣೆ ಕಾರ್ಯಾಗಾರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ವೈವಿಧ್ಯತೆಯ ಸಂರಕ್ಷಣೆಯ ಜಿಲ್ಲಾ ಅದ್ಯಕ್ಷ ಎಚ್. ಪಿ. ಮೋಹನ್ ಮಾತನಾಡಿ, ಭಾರತ ವೈವಿಧ್ಯತೆಯ ಆಗರ. ಅತಿ ಪ್ರಾಚೀನ ನಾಗರಿಕತೆಯುಳ್ಳ ಭಾರತ ನೆಲ,ಜಲ, ಜನ, ಜಾನುವಾರು, ಪ್ರಾಣಿ, ಪಕ್ಷಿ ಹಾಗು ಸಸ್ಯ, ಖನಿಜ  ಮತ್ತು ವಾಯುಗುಣ ಸಂಪನ್ಮೂಲಗಳ ಸಮೃದ್ಧ ದೇಶ. ಕೈಗಾರಿಕೆ ಬೇಕು ಎಂದರೆ ನಾವು ಈ ಎಲ್ಲಾ ಸಂಪತ್ತನ್ನು ಸಂರಕ್ಷಿಸಬೇಕು ಎಂದರು.
ಶೋಷಣೆ ಆಗಬಾರದು: ಮಲೆನಾಡು ಜನಪರ ಹೋರಾಟ ಸಮಿತಿಯ ಅದ್ಯಕ್ಷ ಎಚ್.ಎ. ಕಿಶೋರ್‌ಕುಮಾರ್ ಮಾತನಾಡಿ, ಮಾನವ ಮತ್ತು ಪ್ರಾಣಿಗಳ ಸಂಘರ್ಶದ ಬಗ್ಗೆ ತಿಳಿಸುತ್ತಾ ನಮಗೆ ನಾಗರಿಕತೆ ಬೇಕು ಹಾಗಾಗಿ ಸುಸ್ಥಿರವಾಗಿ ಉಪಯೋಗಿಸಿಕೊಳ್ಳಬೇಕು. ಶೋಷಣೆ ಆಗಬಾರದು ಎಂದರು.  
ಕರಾವಳಿಗೆ ತೊಂದರೆ: ಪ್ರಾಣಿ, ಪಕ್ಷಿ, ಕೀಟ ಸಸ್ಯ ಸಂಕುಲ ಎಲ್ಲವನ್ನೂ ಸಂಪೂರ್ಣ ಹೊರತುಪಡಿಸಿ, ಮಾನವ ಬದುಕಲು ಅಸಾಧ್ಯ. ನಮ್ಮ ದುರ್ಬಳಕೆಯಿಂದ ಭೂ ತಾಪಮಾನ ಜಾಸ್ತಿಯಾಗಿ ಹಿಮಾಲಯದಲ್ಲಿ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಇದರಿಂದ ಕರಾವಳಿ ಪ್ರದೇಶ ಮುಳುಗುತ್ತಿದೆ ಹಾಗೂ ಕೃಷಿಗೆ ತೊಂದರೆಯಾಗಿದೆ ಎಂದರು.
ಪರಿಸರ ತಜ್ಞೆ ಎಚ್.ಕೆ. ಪುಷ್ಪ ಮಾತನಾಡಿ, ಪ್ರಾಕೃತಿಕ ಸಂಪನ್ಮೂಲವು ದೇಶದ ಒಂದು ಅಮೂಲ್ಯ ಆಸ್ತಿ. ಇವುಗಳಲ್ಲೆ ಸಮನಾಗಿ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಪರದೇಶದ ಆಸ್ತಿಯಾಗುತ್ತದೆ ಎಂದರು.
ಫಲ ನೀಡುತ್ತವೆ: ಸಹಾಯಕ ನಿರ್ದೇಶಕ ಬೋರಣ್ಣ ಮಾತನಾಡಿ, ಪ್ರಾಕೃತಿಕ ಸಂಪನ್ಮೂಲವು ದೇಶದ ಒಂದು ಅಮುಲ್ಯ ಆಸ್ತಿ. ಈ ಸಂಪನ್ಮೂಲಗಳ ಆಭಿವೃದ್ಧಿಯನ್ನು ಸರಕಾರ ಮತ್ತು ಜನತೆ ಒಂದಾಗಿ ಪರಸ್ಪರ ಸಹಕಾರದಿಂದ ಮಾಡಿದಲ್ಲಿ ಮಾತ್ರ ಜನರಿಗೆ ಕಾರ್ಯಕ್ರಮದ ಬಗ್ಗೆ ಜವಾಬ್ದಾರಿ ಮೂಡುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಫಲ ನೀಡುವುದು ಎಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋಧಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವಿಷಯದ ಬಗ್ಗೆ ಯಾರೇ ಕೇಳಿದರೂ ಗೊತ್ತಿಲ್ಲ ಎನ್ನಬಾರದು ಎಂದರು.
ಕಾರ್ಯ ನಿರ್ವಾಹಕ ಬಸವರಾಜ್ ಕೆ. ಆರಾಧ್ಯ ಮಾತನಾಡಿ, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯ ನೈಸರ್ಗಿಕ ವೈವಿಧ್ಯತೆಯನ್ನು ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ಜೀವ ವೈವಿಧ್ಯತೆಯ ಸಮಿತಿ ರಚಿಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement