ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಕಾಮಗಾರಿಗೆ ಸಂಸದ ಗುದ್ದಲಿ ಪೂಜೆ

Vishwanath S
Updated On : 7 Mar 2014, 12:21 pm

ಸುತ್ತೂರು: ನಂಜನಗೂಡು ತಾಲೂಕು ಕಾರಾಪುರ, ಕಲ್ಕುಂದ, ಸರಗೂರು ಮುಂತಾದ ಗ್ರಾಮಗಳಲ್ಲಿ ಸುಮಾರು 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸಂಸದ ಆರ್.ಧ್ರುವನಾರಾಯಣ್ ಬುಧವಾರ ಬೆಳಗ್ಗೆ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನ ಜೀವನ ಉತ್ತಮವಾಗಿ ನಡೆಯಲು ನೀರು, ರಸ್ತೆ, ಚರಂಡಿ ನಿರ್ಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿ ಜನರಿಗೆ ಪ್ರಾಥಮಿಕ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಪ್ರಜ್ಞಾವಂತ ಜನರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮಳೆಯಿಂದ ಹಾನಿಗೊಳಗಾದ ನಗರ್ಲೆ ಗ್ರಾಮದ ಸಿದ್ದರಾಜ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿ, ವರುಣಾ ಕ್ಷೇತ್ರದಲ್ಲಿ ನಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಿದ ಮಾತಿನಂತೆ ನಡೆದು ಜನರಿಗೆ ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಸಿ. ಬಸವರಾಜು, ಧರ್ಮೇಂದ್ರ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಕಾರೇಪುರ ಗ್ರಾಮದ ಮಲ್ಲಪ್ಪ, ನಾಗರಾಜು, ಸೋಮಣ್ಣ, ಶಿವಶರಣ ಮಾದರ ಚನ್ನಯ್ಯ ಕಲಾಸಂಘದ ಅಧ್ಯಕ್ಷ ಎನ್. ಸಿದ್ದರಾಜು, ದೊಡ್ಡಮಾದಪ್ಪ, ನಾಗರಾಜಪ್ಪ, ಕೂಸಣ್ಣ, ಕೆಂಚಶೆಟ್ಟಿ, ಸಿದ್ದರಾಜಶೇಟ್ಟಿ, ಶಿವಣ್ಣೇಗೌಡ, ಮಂಜು, ನಾಗನಾಯ್ಕ, ಕಾರಾಪುರ ಸುತ್ತಮುತ್ತಲ ಗ್ರಾಮಸ್ತರು ಮುಖಂಡರು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement