ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರಕಾರಿ ಸವಲತ್ತುಗಳ ಸದುಪಯೋಗಕ್ಕೆ ಮನವಿ

Vishwanath S
Updated On : 7 Mar 2014, 12:20 pm

ಅರಸೀಕೆರೆ: ತಾಂಡ್ಯ ಅಭಿವೃದ್ಧಿ ನಿಗಮದಿಂದ ದೊರೆಯುವ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿ, ಜೀವನಮಟ್ಟ ಸುಧಾರಣೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ಕಾರ್ಯದರ್ಶಿ ಕೆ. ಸದಾಶಿವನಾಯ್ಕ ತಿಳಿಸಿದರು.
ಕರ್ನಾಟಕ ತಾಂಡ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಪ್ರದೇಶ ಲಂಬಾಣಿ ಕಲ್ಯಾಣ ಸಂಘದ ವತಿಯಿಂದ ಪಟ್ಟಣದ ಆರ್.ಆರ್. ರಸ್ತೆಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸರ್ಕಾರದ ವಿವಿಧ ಸವಲತ್ತುಗಳ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾಂಡ್ಯದ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬಹುದು ಎಂದು ವಿಸ್ತಾರವಾಗಿ ತಿಳಿಹೇಳಿದರು.
ಸೌಕರ್ಯಗಳ ಬಗ್ಗೆ ವಿವರಣೆ: ತಾಂಡ್ಯ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ರಮೇಶ್ ನಾಯ್ಕ ಮಾತನಾಡಿ, ಜ್ಞಾನವೆಂಬುದು ಅತ್ಯಮೂಲ್ಯ. ಅದನ್ನು ಪಡೆಯಲು ಸಮಾಜದ ಎಲ್ಲರೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ನಿಗಮದಿಂದ ಸಿಗುವ ಮೂಲ ಸೌಲಭ್ಯ ಹಾಗೂ ನಾನಾ ಆರ್ಥಿಕ ಸಹಾಯದ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ಆರ್. ಸೋಮಶೇಖರ್ ನಾಯ್ಕ ವಹಿಸಿದ್ದರು.  ಉದ್ಘಾಟನೆಯನ್ನು ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಪ್ರಕಾಶ್ ಮೂರ್ತಿ ನೆರವೇರಿಸಿದರು. ಸಮಾಜದ ಮುಖಂಡರಾದ ಮುರುಂಡಿ ಹೀರನಾಯ್ಕ, ಆನಂದ್ ನಾಯ್ಕ, ಸೋಮಣ್ಣನಾಯ್ಕ, ಕೃಷ್ಣನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement