ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಚ್‌ಐವಿ ಪೀಡಿತರ ಬಗ್ಗೆ ತಾರತಮ್ಯ ತೋರಿದರೆ ಜೈಲು

Vishwanath S
Updated On : 8 Mar 2014, 1:00 am

ರಾಮನಾಥಪುರ: ಏಡ್ಸ್ ರೋಗಿಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಕಳಂಕಿತರು ಎಂದು ತಾರತಮ್ಯ ಮಾಡಿದರೆ ಅಂತಹವರಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡು ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಹರೀಶ್ ಗೌಡ ತಿಳಿಸಿದರು.
ಕೊಣನೂರಿನ ಬಿ.ಎಂ. ಶೆಟ್ಟಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಕೊಣನೂರು ಸಮುದಾಯ ಆರೋಗ್ಯ ಕೇಂದ್ರ, ರೆಡ್‌ರಿಬ್ಬನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ರೋಗ ತಗುಲಿದ ಒಂದು ವರ್ಷದೊಳಗೆ ಚಿಕಿತ್ಸೆ ಪಡೆದರೆ ಆಯಸ್ಸನ್ನು ಒಂದು ವರ್ಷಗಳ ಕಾಲ ಹೆಚ್ಚಿಸಬಹುದು ಎಂದರು.
ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಆನಂದ್ ಗೌಡ ಮಾತನಾಡಿ, ಪ್ರತಿ ಗುರುವಾರ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್‌ಗೆ ಭೇಟಿ ಕೊಟ್ಟು ಯಾವುದೇ ಗುಪ್ತ ವಿಷಯಗಳ ಬಗ್ಗೆ ಚರ್ಚೆನಡೆಸಬಹುದು. ಅದರಲ್ಲೂ ವಿದ್ಯಾರ್ಥಿನಿಯರು ಯಾವುದೇ ಮುಜುಗರಕ್ಕೆ ಒಳಗಾಗದೇ ಸ್ನೇಹ ಕ್ಲಿನಿಕ್‌ನಲ್ಲಿರುವ ಆರೋಗ್ಯ ಸಹಾಯಕಿಯರ ಜತೆ ಗುಪ್ತ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಹೆಚ್.ಐ.ವಿ ಪರೀಕ್ಷೆಯನ್ನು ಪರೀಕ್ಷಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಉಪನ್ಯಾಸಕರು ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಪ್ರಾಂಶುಪಾಲ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ನಟರಾಜ್, ದೈಹಿಕ ಶಿಕ್ಷಣ ನಿರ್ದೇಶಕರಾದ ಲಕ್ಷೀಶ್, ಚಂದ್ರೇಗೌಡ, ಕೆ.ಬಿ. ಕುಮಾರ್, ಕೃಷ್ಣ ,ಶಿವಣ್ಣ, ರವಿ, ಪ್ರಮೀಳಾ ಇನ್ನೂ ಹಲವರು ಇದ್ದರು. ಲಕ್ಷೀಶ್ ನಿರೂಪಿಸಿದರು. ವಿದ್ಯಾರ್ಥಿ ಅಭಿಷೇಕ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement