ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಕ್ಕಲಿಗರ ಸಂಘದ ಆಸ್ತಿ ಲಪಟಾಯಿಸಿಲ್ಲ: ಮಹೇಶ್

Vishwanath S
Updated On : 8 Mar 2014, 12:59 pm

ಹಾಸನ: ಒಕ್ಕಲಿಗರ ಸಂಘದ ಆಸ್ತಿಯನ್ನು ಲಪಟಾಯಿಸಿದ್ದೇನೆ ಎಂದು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಕೆಲವರು ಮಾಡಿರುವ ಆರೋಪಗಳು ಸುಳ್ಳು ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಕೆ. ಮಹದೇವ್ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಗಮ್ಮ ಕೃಷ್ಣಪ್ಪ ಎಂಬವರು ಶಿಕ್ಷಣದ ಉದ್ದೇಶಕ್ಕಾಗಿ 1965ರಲ್ಲಿ ಸಂಘಕ್ಕೆ 96 ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಆದರೆ, ಈ ಜಾಗವನ್ನು ನಾನು ಲಪಟಾಯಿಸಿದ್ದೇನೆ ಎಂದು ಸುಳ್ಳು ಆರೋಪಗಳನ್ನು ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷ ಆರ್. ಮಂಜುನಾಥ್, ಬಸವೇಗೌಡ ಹಾಗೂ ಇತರರು ಸೇರಿದಂತೆ 10 ಮಂದಿ ನನ್ನ ಆರೋಪಿಸಿದ್ದಾರೆ ಎಂದರು.
ಲಪಟಾಯಿಸಲು ಸಾಧ್ಯವಿಲ್ಲ: 96 ಎಕರೆಗಳ ಪೈಕಿ 52 ಎಕರೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರ ಇರುವುದರಿಂದ ಯಥಾಸ್ಥಿತಿ ಕೋರ್ಟ್‌ನ ಆದೇಶವನ್ನು ಪಾಲಿಸಬೇಕಾಗಿದೆ. ಈಗಿರುವಾಗ ನಾನು ಸಂಘದ ಆಸ್ತಿಯನ್ನು ಲಪಟಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಣ ವಸೂಲಿ: ಜೊತೆಗೆ ಕೆಐಎಂಎಸ್ (ಓಐಂಖ) ಕಾಲೇಜಿನ ಸೀಟು ವಿಚಾರಕ್ಕೆ ಸಂಬಂಧಿಸಿದಂತೆ 2007-08ನೇ ಸಾಲಿನಲ್ಲಿ ಡಾ. ವಿಠಲ್ ಮತ್ತು ಎಚ್.ಕೆ. ರಮೇಶ್ ಅವರ ಆಡಳಿತಾವಧಿಯಲ್ಲಿ ಕಾಲೇಜಿನ ಸೀಟಟ್ಗಳನ್ನು ಕೆಲವು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮುಂಬೈ, ಆಂಧ್ರಪ್ರದೇಶದ ವಿದ್ಯಾರ್ಥಿಗಳಿಗೆ ಈ ಸೀಟುಗಳನ್ನು ಮಾರಾಟ ಮಾಡಿಕೊಂಡಿದ್ದರು. ಸಂಸ್ಥೆಗೆ ಕೇವಲ ಎರಡರಿಂದ ಮೂರು ಲಕ್ಷ ಪಾವತಿಸಿ, ವಿದ್ಯಾರ್ತಿಗಳಿಂದ ರು. 30ರಿಂದ 35 ಲಕ್ಷ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸುಮ್ಮನೇ ಅಪಪ್ರಚಾರ: ಸೀಟುಗಳ ದುರ್ಬಳಕೆಯಾಗುತ್ತದೆ ಎಂಬ ಕಾರಣಕ್ಕೆ 2011ರಲ್ಲಿ ಡ್ರಾಪ್‌ಔಟ್ ಆದ ಸೀಟುಗಳನ್ನು ತುಂಬದಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಅಪ್ಪಾಜಿಗೌಡ, ಪ್ರಸಾದ್, ನಾಗರಾಜ್ ಅವರು ಸಹಿಯನ್ನು ಮಾಡಿದ್ದಾರೆ. ಆದರೆ, ನಂತರ ಅವರು ಈ 24 ಸೀಟುಗಳನ್ನು ಮಾರಾಟ ಮಾಡದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆದರೆ, ಆ ಸೀಟುಗಳು ಮಾರಾಟವಾಗದೇ ಹಾಗೇ ಖಾಲಿ ಉಳಿದವು. ಆದ್ದರಿಂದ ಅಪ್ಪಾಜಿಗೌಡ, ಮಂಜುನಾಥ್, ಬಸವೇಗೌಡ, ರಾಜಶೇಖರ್, ಪ್ರಸಾದ್, ನಾಗರಾಜ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸುಳ್ಳು ಪ್ರಸಾರ ಮಾಡಿರುವ ಮಾದ್ಯಮ ಕ್ಷಮೆಯಾಚನೆ ಮಾಡಿ ನೈಜ ವರದಿ ಪ್ರಸಾರ ಪಡಿಸಬೇಕು. 207-8ರಲ್ಲಿ ಸೀಟುಗಳನ್ನು ಮಾರಾಟ ಮಾಡಿರುವವರ ಹೆಸರನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement