ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಖರೀದಿ ದಿನಾಂಕ ವಿಸ್ತರಣೆಗೆ ರೈತರ ಆಗ್ರಹ

Vishwanath S
Updated On : 8 Mar 2014, 12:59 pm

ಬೇಲೂರು: ಎಪಿಎಂಸಿಯಲ್ಲಿ ಮುಸುಕಿನ ಜೋಳ ಖರೀದಿಯನ್ನು ಅಂತ್ಯಗೊಳಿಸಿದ್ದು ಮತ್ತೆ 2 ತಿಂಗಳವರೆಗೆ ಖರೀದಿ ದಿನಾಂಕವನ್ನು  ವಿಸ್ತರಣೆ  ಮಾಡಬೇಕು ಎಂಬುದಾಗಿ ರೈತರು ಒತ್ತಾಯಿಸಿದ್ದಾರೆ.
ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರ್ಕಾರದ ಬೆಂಬಲ ಬೆಲೆ ರು. 1310ನಲ್ಲಿ   ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭ ಮಾಡಲಾಗಿತ್ತು. ಪ್ರಸ್ತುತ ಖರೀದಿ ಕೇಂದ್ರದಲ್ಲಿ 850 ರೈತರು ರು. 7 ಕೋಟಿ ವಹಿವಾಟನ್ನು ಮಾಡಿದ್ದಾರೆ. ಹಾಸನದ ಗೋಡೌನ್ ಭರ್ತಿಯಾದ ಹಿನ್ನೆಲೆಯಲ್ಲಿ ಮಸುಕಿನಜೋಳದ ಖರೀದಿಯನ್ನು ಈಗ   ನಿಲ್ಲಿಸಲಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಿದ್ದಾರೆ.  
ಮನವಿ: ಸುತ್ತಮುತ್ತಲಿನ ಗ್ರಾಮದಿಂದ ಕಳೆದ 2 ದಿನದಲ್ಲಿ 25 ಸಾವಿರ ಮೂಟೆಗಳು ಬಂದಿದ್ದು ಖರೀದಿ ಕೇಂದ್ರಕ್ಕೆ ಬಂದಿದ್ದರೂ ದಿನಾಂಕ ಮುಗಿದಿದೆ ಎಂದು ಖರೀದಿ ಮಾಡದಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
 ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಅವರನ್ನು ರೈತರು ಭೇಟಿ ಮಾಡಿ ಮುಸುಕಿನ ಜೋಳ ಖರೀದಿ ದಿನಾಕವನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.
ರೈತ ಮುಖಂಡ ಕನಾಯಕನಹಳ್ಳಿ ಮಹದೇವವ್ ಹಾಗೂ ರೈತರು ಕಳೆದ 3 ದಿನ ಎಪಿಎಂಸಿಗೆ ರಜೆ ಇದ್ದ ಕಾರಣ ಎಪಿಎಂಸಿಯಲ್ಲಿ ಭಾರಿ ಪ್ರಮಾಣದ ಮುಸುಕಿನಜೋಳ ಖರೀದಿಗೆ ಬಂದಿದೆ. ಜೋಳ ಖರೀದಿ ಆರಂಭ ಮಾಡಿ ಎಂದರೆ, ಹಾಸನದ ಗೋಡೌನ್ ಭರ್ತಿಯಾಗಿದೆ, ಅದು ಕಾರಣ ಖರೀದಿ ಮಾಡುವುದಿಲ್ಲ ಎಂದು ಅಧಿಕಾರಿಗಳು  ಹೇಳುತ್ತಾರೆ.
ತಹಸೀಲ್ದಾರ್ ನಮ್ಮ ಮನವಿಗೆ ಸ್ಪಂದಿಸಿ ವಿಸ್ತರಣೆ ಮಾಡುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಿಂಗಾರು ಮಳೆಯಲ್ಲಿ ಬೆಳೆದ ಮುಸುಕಿನಜೋಳದ ಕುಯ್ಲಿಗೆ ಇನ್ನೂ ಸಮಯವಿದ್ದು ಅಲ್ಲಿಯವರೆಗೆ ಜೋಳ ಖರೀದಿ ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ಹಿಂಗಾರಿನಲ್ಲಿ ಬೆಳೆದ ಜೋಳ ಈ ತಿಂಗಳು ಕಟಾವು ಆಗುತ್ತಿದೆ. ಬಯಲುಸೀಮೆ ಕಡೆ ಪಂಪ್‌ಸೆಟ್ ಅವಲಂಬಿಸಿದ ಬೆಳೆಯನ್ನು ಈಗ ಬೆಳೆಯುತ್ತಿದ್ದಾರೆ. ಏಕಾಏಕಿ ಜೋಳ ಖರೀದಿ ಕೇಂದ್ರದಲ್ಲಿ ನಿಲ್ಲಿಸಿರುವುದರಿಂದ ರೈತರಿಗೆ ಅನಾನೂಕೂಲವಾಗುತ್ತದೆ. ರು. 1300 ಸರ್ಕಾರಿ ಬೆಂಬಲ ಬೆಲೆ ಇದ್ದರೂ, ಈಗ ರೈತರು 800ರಿಂದ 900ಗೆ ಕೊಡುವ ಪರಿಸ್ಥಿತಿ ಬಂದಿದೆ. ಇದರಲ್ಲಿ ಸ್ಥಳೀಯ ವ್ಯಾಪಾರಿಗಳ ಕುಮ್ಮಕ್ಕು ಇದೆ.
-  ಬಳ್ಳೂರು ಸ್ವಾಮಿಗೌಡ
ರೈತ ಸಂಘದ ಸಂಘಟನಾ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement