ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸ್ಮಿಕರಣ ಗುಂಡಿಗೆ ಬಿದ್ದು ಯುವಕ ಸಾವು

Vishwanath S
Updated On : 9 Mar 2014, 1:15 am

ಬೇಲೂರು: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ಮಿಕರಣದ (ಕೊಳಚೆ ವಸ್ತುಗಳನ್ನು ಒಂದೇ ಸಂಗ್ರಹಿಸಿ ಸುಡುವ ಸ್ಥಳ) ಹೊಂಡಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದು, ಸರ್ಕಾರ ಸಾವನ್ನಪ್ಪಿರುವ ಯುವಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ದರ್ಗಾ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ರಾತ್ರಿ ಇಲ್ಲಿನ ಹೊಳೆಬೀದಿಯಲ್ಲಿ ಮುಸ್ಲಿಂ ಭಾಂದವರು ಉರುಸ್ ನಡೆಸುವ ಸಂದರ್ಭದಲ್ಲಿ ದರ್ಗಾ ಮುಂದಿರುವ ಪುರಸಭೆ ನಿರ್ವಹಣೆ ಮಾಡುತ್ತಿರುವ ಯು.ಜಿ.ಡಿ ಬಸ್ಮೀಕರಣದ ಹೊಂಡ ಇದೆ. ಈ ಸ್ಥಳದಲ್ಲಿ ಯಾವುದೇ ಭದ್ರತೆ ಇಲ್ಲದಿರುವುದರಿಂದ ಬಸ್ಮಿಕರಣದ ಹೊಂಡಕ್ಕೆ ಹಾಸನದ ಶೇಕ್ ಸಾಹಿದ್ ಎಂಬ 23 ವರ್ಷದ ಯುವಕ ಬಿದ್ದು ಸಾವನ್ನಪ್ಪಿದ್ದ.
ವಿವರ: ಶುಕ್ರವಾರ ರಾತ್ರಿ 11.30 ರಲ್ಲಿ ದರ್ಗಾದಲ್ಲಿ ನೂರಾರು ಜನರು ಸೇರಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹಾಸನದ ಯುವಕ ಶೇಕ್ ಸಾಹಿದ್ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದ. ಇದಕ್ಕೆ ಪುರಸಭೆಯವರು ಹೊಂಡದ ಮುಂಭಾಗವಿರುವ ಗೇಟ್‌ಗೆ ಬೀಗ ಹಾಕಲಾಗಿಲ್ಲ. ಹೊಂಡದಲ್ಲಿ ವಿದ್ಯುತ್ ದೀಪ ಅಳವಡಿಸಿಲ್ಲ ಹಾಗೂ ಹೊಂಡದ ಕಾವಲಿಗೆ ಯಾರನ್ನು ನೇಮಿಸದೇ ಇರುವುದೇ ಯುವಕನ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ದರ್ಗ ಸಮಿತಿಯವರು ಕೂಡಲೇ ಪುರಸಭೆ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಹೊಂಡದ ಸುತ್ತ ಸ್ವಚ್ಛಗೊಳಿಸದೆ ಹುಲ್ಲು ಬೆಳೆದಿದ್ದು, ಹೊಂಡ ಪಾಚಿಯಿಂದ ಕೂಡಿ ರ್ದುವಾಸನೆ ಬರುತ್ತಿದ್ದರು ಪುರಸಭೆ ಸಿಬ್ಬಂದಿ ಗಮನಹರಿಸದೆ ಇರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಂತರಕ್ಕೆ ಒತ್ತಾಯ: ಅವೈಜ್ಞಾನಿಕವಾಗಿ ನಿರ್ಮಿಸಿರುವ ಬಸ್ಮಿಕರಣ ಹೊಂಡವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ದರ್ಗಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ಶಾಲೆ-ಕಾಲೇಜುಗಳು, ದರ್ಗಾ,ದೇವಾಲಯಗಳು ಇರುವುದಲ್ಲದೆ ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು ಬಸ್ಮಿಕರಣ ಹೊಂಡದ ವಾಸನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳು ಕಾಯಿಲೆ ಬೀಳುವ ಸಂಭವವಿದ್ದು ಸರ್ಕಾರ ಈ ಬಗ್ಗೆ ಚಿಂತನೆ ನೆಡೆಸಿ ಬೇರೆಡೆಗೆ ಸ್ಥಳಂತರ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಮಾಜಿ ಸದಸ್ಯ ಜಮಾಲ್, ದರ್ಗದ ಮುಂದೆ ಬಸ್ಮಿಕರಣ ಹೊಂಡ ನಿರ್ಮಾಣ ಮಾಡಿರುವುದಿಂದ ಸ್ಮಶಾನದಲ್ಲಿ ಗುಂಡಿ ತೆಗೆಯುವಾಗ ಕಟ್ಟವಾಸನೆ ಬರುವುದಲ್ಲದೆ ಕಲ್ಮಶ ನೀರೂ ಬರುತ್ತಿದ್ದು ಸರ್ಕಾರ ಕೂಡಲೆ ಹೊಂಡವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರದ ಜಾಕೀರ್, ಶಕೀಲ್ ಇತರರು ಹಾಜರಿದ್ದರು.
ತಹಸೀಲ್ದಾರ್ ಸ್ಪಷ್ಟನೆ
ಈ ಬಗ್ಗೆ ತಹಸೀಲ್ದಾರ್ ಜಗದೀಶ್ ಮಾತನಾಡಿ, ಘಟನೆ ವಿವರವನ್ನು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದು ಸರ್ಕಾರದಿಂದ ಶೀಘ್ರವಾಗಿ ಇಪ್ಪತ್ತು ಸಾವಿರ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement