ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಹಾಸನ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ. 12ರಿಂದ ಮಾ. 27ರವರೆಗೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 17,766 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 37 ಪರೀಕ್ಷಾ ಕೇಂದ್ರಗಳಿದ್ದು ಕಲಾ ವಿಭಾಗಕ್ಕೆ 8269 ವಾಣಿಜ್ಯ ವಿಭಾಗಕ್ಕೆ 5132, ವಿಜ್ಞಾನ ವಿಭಾಗಕ್ಕೆ-4366, ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು 2210 ಮತ್ತು ಖಾಸಗಿ ಅಭ್ಯರ್ಥಿಗಳು 1126 ಹಾಜರಾಗುತ್ತಿದ್ದು ಇದೇ ಪ್ರಥಮ ಬಾರಿಗೆ 14,430 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಬಾಲಕರು 8126 ಹಾಗೂ ಬಾಲಕಿಯರು 9640 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎನ್. ರಾಜಮ್ಮ ತಿಳಿಸಿದ್ದಾರೆ.
2013-14 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳ ತಾಲ್ಲೂಕುವಾರು ವಿವರ ಇಂತಿದೆ.
ತಾಲೂಕು ಪರೀಕ್ಷಾ ಬಾಲಕರು ಬಾಲಕಿಯರು ಒಟ್ಟು ಕೇಂದ್ರಗಳು
ಹಾಸನ 123 2668 3592 6260
ಆಲೂರು 2 300 380 680
ಸಕಲೇಶಪುರ 1 326 360 686
ಬೇಲೂರು 3 682 810 1492
ಹೊಳೆನರಸೀಪುರ 3 737 937 1674
ಅರಕಲಗೂಡು 4 737 772 1506
ಚನ್ನರಾಯಪಟ್ಟಣ 4 1062 1394 2456
ಅರಸೀಕೆರೆ 7 1617 1395 3012
ನಿಷೇಧಾಜ್ಞೆ ಜಾರಿ; ಜೆರಾಕ್ಸ್ ಅಂಗಡಿ ಬಂದ್
ಹಾಸನ: 2013-14 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಮಟ್ಟದಲ್ಲಿ ಒಂದು ಮತ್ತು ತಾಲೂಕು ಮಟ್ಟದಲ್ಲಿ 5 ಹಾಗೂ ಕೇಂದ್ರ ಕಚೇರಿಯ ವಿಭಾಗೀಯ ಮಟ್ಟದಿಂದ ಒಂದು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಒಂದೊಂದು ಸ್ಥಾನಿಕ ಜಾಗೃತ ದಳಗಳು ಕರ್ತವ್ಯ ನಿರ್ವಹಿಸುತ್ತಿವೆ. ಪರೀಕ್ಷೆಯು ಸುಗಮವಾಗಿ ನಡೆಯಲು ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಯಾ ಉಪ ವಿಭಾಗಾಧಿಕಾರಿಗಳು ಜಾರಿಗೊಳಿಸಿದ್ದಾರೆ. ಪರೀಕ್ಷಾ ದಿನಗಳಂದು ಸದರಿ ನಿಷೇಧಿತ ವಲಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಸಂಬಂಧಿಸದ ವ್ಯಕ್ತಿಗಳು ಅನಧಿಕೃತ ಪ್ರವೇಶ ಮಾಡದಂತೆ ನಿಷೇಧಿಸಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎನ್. ರಾಜಮ್ಮ ತಿಳಿಸಿದ್ದಾರೆ.