ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಗತಿಯ ಪ್ರತೀಕವಾಗಿ ಮಹಿಳಾ ದಿನಾಚರಣೆ

Vishwanath S
Updated On : 12 Mar 2014, 1:16 am

ಸಕಲೇಶಪುರ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ , ಅಂತಾರಾಷ್ಟ್ರೀಯ ಮಹಿಳೆಯರ ದಿನಚಾರಣೆಯ ದಿನವನ್ನು ಅವರಿಗೆ ಅರ್ಪಿಸಲಾಗಿದೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಎಚ್. ಶಿಲ್ಪ ತಿಳಿಸಿದರು.
ಸೋಮವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳೆಯರ ದಿನಾಚಾರಣೆಯ ಅಂಗವಾಗಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲೂ ಸಮಾನ ಹಕ್ಕು ಪಡೆಯಲು ಮುಂದಾಗಿದ್ದಾರೆ ಎಂದರು.
ಕೀಳರಿಮೆ ತೊಲಗಲಿ: ಮಹಿಳೆಯರ ಪರವಾದ ಕಾನೂನುಗಳಿದ್ದರು ಹಕ್ಕುಗಳು ದೊರತೆಯುತ್ತಿಲ್ಲ. ಹೆಣ್ಣು ಎಂಬ ಕೀಳರಿಮೆ ಕೊನೆಗೊಳ್ಳಬೇಕು ಎಂದು ಹೇಳಿದರು.
ವಿದ್ಯೆಗಿಂತ ಚಾರಿತ್ರ್ಯ ಮುಖ್ಯ: ವಕೀಲರ ಸಂಘದ ಅಧ್ಯಕ್ಷ ಆರ್.ಎನ್. ಕೃಷ್ಣಮೂರ್ತಿ ಮಾತನಾಡಿ, ಮಹಿಳೆಯಲ್ಲಿರುವ ಸಾಮರ್ಥ್ಯ ಮತ್ತು ಕೌಶಲತೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕು. ಇಲ್ಲಿ ಲಿಂಗ ತಾರತಮ್ಯ ಮಾಡಬಾರದು. ದೃಶ್ಯ ಮಾದ್ಯಮಗಳು ಸಮಾಜದ ಮೇಳೆ ಬಹಳ ಪ್ರಭಾವ ಬೀರುತ್ತವೆ. ಇವು ಪ್ರಸಾರ ಮಾಡುವ ಧಾರಾವಾಹಿಗಳಲ್ಲಿ ಮಹಿಳೆಯರನ್ನು ಖಳನಾಯಕಿಯಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಕುಟುಂಬಗಳಲ್ಲಿ ವೈಮನಸ್ಸು ಮೂಡುತ್ತಿದೆ. ವಿದ್ಯೆಗಿಂತ ಚಾರಿತ್ರ್ಯ ಮುಖ್ಯವಾದದ್ದು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎನ್. ಆರ್. ಲೋಕಪ್ಪ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಸಹಾಯಕ ಅಭಿಯೋಜಕಿ ನಾಗರತ್ನ, ಶಿರಸ್ತೆದಾರ್ ದೇವಮ್ಮ, ವಿಜಯಕುಮಾರಿ, ಹಿರಿಯ ವಕೀಲರಾದ ಪರಮೇಶ್ವರಪ್ಪ, ಯು.ಟಿ. ಮಲ್ಲಪ್ಪ ಇದ್ದರು.
ನೈಜ ಸೌಂದರ್ಯ ನಡೆನುಡಿಯಲ್ಲಿ
ಕಾರ್ಯಾಗಾರದಲ್ಲಿ ಮಾತನಾಡಿದ ವಕೀಲೆ ಹಾಗೂ ಮಹಿಳಾ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷ ಕಲ್ಪನಾಕೀರ್ತಿ ಮಾತನಾಡಿ, ಮಹಿಳೆಯರ ಹಕ್ಕನ್ನು ಸಮಾಜ ಶಾಸನದ ಮೂಲಕ ನೀಡದೆ. ಪ್ರಮಾಣಿಕ ಮನಸ್ಸಿನಿಂದ ನೀಡಿಬೇಕು. ಮಹಿಳೆಯು ಹಕ್ಕಿಗಾಗಿ ಹೋರಾಟ ನಡೆಸುವ ಮೂದಲೇ ಅವಳ ಹಕ್ಕನ್ನು ನೀಡುವ ಮೂಲಕ ಪುರುಷರು ಸಮಾಜಕ್ಕೆ ಮಾಧರಿಯಾಗಬೇಕು. ಮಹಿಳೆಯ ಸೌಂದರ್ಯ ಉಡುಗೆಯಲ್ಲಿಲ್ಲ, ನಡೆ- ನುಡಿಯಲ್ಲಿರುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement