ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತ್ಯೇಕ ರಸ್ತೆ ಅಪಘಾತ; 3 ಸಾವು

Vishwanath S
Updated On : 12 Mar 2014, 1:17 am

ಹಾಸನ: ಜಿಲ್ಲೆಯ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ದೊಡ್ಡಬಸವನಹಳ್ಳಿ ಗ್ರಾಮದ ವಾಸಿ ರಾಮಚಂದ ್ರ(57) ಅವರು ಬೈಕ್‌ನಲ್ಲಿ ಇಂಡಸ್ಟ್ರಿಯಲ್ ಏರಿಯಾ ಕೆಐಎಡಿಬಿ ವೃತ್ತದ ಹತ್ತಿರ ಪಂಚರ್ ಅಂಗಡಿಯ ಮುಂಭಾಗ ಬೈಕ್ ನಿಲ್ಲಿಸಿ ಎದುರುಗಡೆ ಇರುವ ಕ್ಯಾಂಟಿನ್‌ಗೆ ಹೋಗಿ ಕಾಫಿ ಕುಡಿದು ಹಾಸನ- ಹೊಳೆನರಸೀಪುರ ರಸ್ತೆ ದಾಟುತ್ತಿದ್ದಾಗ ಹಾಸನ ಕಡೆಯಿಂದ ಬಂದ ಟಾಟಾ ಪಿಕಪ್ ವಾಹನ ರಾಮಚಂದ್ರ ಅವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಬೇಜವ್ದಾರಿಯಾಗಿ ಪಿಕಪ್ ವಾಹನ ಓಡಿಸಿಕೊಂಡು ಬಂದಿದ್ದರಿಂದ ಈ ಅಪಘಾತವಾಗಿದೆ ಎನ್ನಲಾಗಿದೆ.
ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಪಾಸಣೆ ನಡೆಸುವಷ್ಟರಲ್ಲಿ ರಾಮಚಂದ್ರ ಮೃತಪಟ್ಟಿದ್ದರು. ಮೃತರ ಸಂಬಂಧಿಕ ಗುರುರಾಜ್, ಹಾಸನ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇಬ್ಬರ ಸಾವು: ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಸಂಕಿಹಳ್ಳಿ ಗ್ರಾಮದ ಮಧು (21) ಮೃತಪಟ್ಟಿದ್ದಾರೆ. ಅವರು, ಬೈಕ್‌ನಲ್ಲಿ ಸ್ನೇಹಿತನಾದ ಮನು (19) ರವರೊಂದಿಗೆ ತಾಲ್ಲೂಕಿನ ಜಾವಗಲ್ ರಸ್ತೆಯ ಬಾಣಾವರ ರೇಲ್ವೆ ಬ್ರಿಡ್ಜ್ ಹತ್ತಿರ ಹೋಗುತ್ತಿದ್ದಾಗ ನಿರ್ಲಕ್ಷತೆಯಿಂದ ಸಾಗಿ, ರೇಲ್ವೆ ಸೇತುವೆಯ ಕೆಳಗೆ ಡಿವೈಡರ್‌ಗೆ ಡಿಕ್ಕಿ ಹೊಡಿದ ಪರಿಣಾಮ ಬೈಕ್ ಜಖಂಗೊಂಡು ಮನು ಮತ್ತು ಮಧುಗೆ ತೀವ್ರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬಾಣಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಧು ಮತ್ತು ಮನು ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕ ಗಣೇಶಪ್ಪ ಅವರು ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೂಜಾಡುತ್ತಿದ್ದ 5 ಜನರ ಬಂಧನ: ರು. 4220 ಹಣ ವಶ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿದ್ದು, ರು. 4220ಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಹಾಸನ ತಾಲ್ಲೂಕಿನ ಗ್ಯಾರಹಳ್ಳಿ ಗ್ರಾಮದ ಕೆರೆ ಹತ್ತಿರ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಮೋದ್ ಕುಮಾರ್ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ಮಾಡಿ ಜೂಜಾಡುತ್ತಿದ್ದ ವೆಂಕಟೇಶ (39), ಆನಂದ (35) ಮತ್ತು ಕೆ.ಆರ್. ವೆಂಕಟೇಶ (39) ಎಂಬುವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 3200 ನಗದನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ನಗರ ಕಂತೇನಹಳ್ಳಿ ಸಮೀಪ ಸರ್ಕಾರಿ ಜಾಗದಲ್ಲಿ  ಅಂದರ್‌ಬಾಹರ್ ಜೂಜಾಡುತ್ತಿದ್ದಾಗ ನಗರ ಠಾಣೆಯ ಪಿಐ ಬಿ.ಎಸ್. ನಂದಕುಮಾರ್‌ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ಮಾಡಿ ಜೂಜಾಡುತ್ತಿದ್ದ ಚಂದು (36) ಮತ್ತು ಮಂಜುನಾಥ (22) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 1020 ನಗದನ್ನು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಮಾರಾಟ: ಮೂವರ ಸೆರೆ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಕಸಬಾ ಹೋಬಳಿ, ಗ್ಯಾರಹಳ್ಳಿ ಗ್ರಾಮದ ವಾಸಿ ರವಿ (32) ಅವರ ಮನೆಯ ಪಕ್ಕದ ಖಾಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದ ರವಿ ಎಂಬುವರನ್ನು ಬಂಧಿಸಿದ್ದು, ಅಕ್ರಮವಾಗಿ ಮಾರಾಟಕ್ಕಿಟ್ಟಿದ್ದ ಸುಮಾರು 1329 ರು. ಬೆಲೆಯ 180 ಎಂಎಲ್‌ನ ಓರಿಜಿನಲ್ ಚಾಯ್ಸ್ ನ 12 ಟೆಟ್ರಾ ಪ್ಯಾಕೆಟ್‌ಗಳು, 90 ಎಂಎಲ್‌ನ ಪ್ಲಾಸ್ಟಿಕ್ ಬಾಟಲ್‌ಗಳು, 90 ಎಂಎಲ್‌ನ 20 ಸಾಚೇಟ್ ಮತ್ತು 90 ಎಂಎಲ್‌ನ ಸಿಲ್ವರ್‌ರೇರ್ ಬ್ರಾಂದಿ 20 ಸ್ಯಾಚೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿಗ್ರಾಮ ವ್ಯಾಪ್ತಿಯಲ್ಲಿ ಪ್ರಕರಣ: ಮತ್ತೊಂದು ಪ್ರಕರಣದಲ್ಲಿ, ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ಸಂತೆ ಮೈದಾನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶಾಂತಿಗ್ರಾಮ ಠಾಣೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮದ್ಯ ಮಾರಾಟ ಮಾಡುತ್ತಿದ್ದ ರಂಗಸ್ವಾಮಿ (47) ಎಂಬುವನನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ ಸುಮಾರು ರು. 1300 ಬೆಲೆಯ 180 ಎಂಎಲ್‌ನ 25 ಓರಿಜಿನಲ್ ಚಾಯ್ಸ್ ಟೆಟ್ರಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದು, ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲ್ಲೂಕಿನ ಜೆ.ಸಿ. ಪುರ ಗ್ರಾಮದ ಸತೀಶ್ ಅವರ ಮನೆಯ ಮುಂಭಾಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ  ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸತೀಶ್ (48) ಎಂಬುವರನ್ನು ಬಂಧಿಸಿದ್ದು, ಮಾರಾಟ್ಟಿಕ್ಕಿದ್ದ ಸುಮಾರು ರು. 1025 ಬೆಲೆಯ ರಾಜಾ ವಿಸ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement