ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಹಿಳಾ ಹಕ್ಕು ಶಾಸನದಿಂದಲ್ಲ, ಮನಸ್ಸಿನಿಂದ ನೀಡಿ'

Vishwanath S
Updated On : 12 Mar 2014, 1:15 am

ಸಕಲೇಶಪುರ: ಶಾಸನದ ಮೂಲಕ ನೀಡಲಾಗುತ್ತಿರುವ ಮಹಿಳೆಯರ ಹಕ್ಕನ್ನು, ಪುರುಷ ಪ್ರಧಾನ ಸಮಾಜ ಪ್ರಾಮಾಣಿಕ ಮನಸ್ಸಿನಿಂದ ನೀಡಿದಾಗ ಮಾತ್ರ ವಕೀಲೆ ಹಾಗೂ ಮಹಿಳಾ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷ ಕಲ್ಪನಾಕೀರ್ತಿ ಹೇಳಿದರು.
ಪಟ್ಟಣದ ಕುಶಾಲನಗರ ಬಡಾವಣೆಯ ಮಿನಿ ಸಮುದಾಯ ಭವನದಲ್ಲಿ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್ಸ್ ವತಿಯಿಂದ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯು ಹಕ್ಕಿಗಾಗಿ ಹೋರಾಟ ನಡೆಸುವ ಮೂದಲೇ ಅವಳ ಹಕ್ಕನ್ನು ನೀಡುವ ಮೂಲಕ ಪುರುಷರು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
77ರಿಂದ ಎಲ್ಲೆಡೆ ದಿನಾಚರಣೆ: 1975ರ ಸಮಯದಲ್ಲಿ, ಮಾ. 8ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ, 1977ರಲ್ಲಿ ದಿ. ಜನರಲ್ ಅಸ್ಸೆಂಬ್ಲಿ ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು.
ಮೊದಲು ಅಮೆರಿಕದಲ್ಲಿ: ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ ಅಂತಾರಾಷ್ಟ್ರೀಯ ಮಹಿಳೆಯರ ದಿನ   1909ರಲ್ಲಿ ಫೆ. 28ರಂದು ಆಚರಿಸಲಾಯಿತು. 1910ರಲ್ಲಿ ಅಂತಾರಾಷ್ಟ್ರೀಯ ಸಮಾಜವಾದಿ ನಾಯಕರು ಕೊಪನ್‌ಹೇಗ್‌ನಲ್ಲಿ ನಡೆದ ಚರ್ಚೆಯಲ್ಲಿ ಇದನ್ನು ಅಧಿಕೃತಗೊಳಿಸಿದರು. ಈ ಪ್ರಸ್ತಾಪವನ್ನು ಅವಿರೋಧವಾಗಿ 100 ಮಹಿಳೆಯರು 17 ದೇಶಗಳಿಂದ ಸಹಕರಿಸಿದರು.
ಕೊಪನ್‌ಹೇಗ್‌ನಲ್ಲಿ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ 1911ರ ಮಾ. 19ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲೆಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಈ ಚಳವಳಿಯಲ್ಲಿ ಭಾಗವಹಿಸಿದರು ಎಂದು ಅವರು ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ವಿವರಿಸಿದರು.  
ತಮ್ಮ ಇಲಾಖೆಯಿಂದ ಮಹಿಳಾ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದ ಅವರು, ಯಾವುದೇ ಯೋಜನೆಗಳಿಗೆ ಅರ್ಹರಾಗಬೇಕಾದರೆ ನೋಂದಣಿ ಮಾಡಿಸಿ ಸ್ಮಾರ್‌ಕಾರ್ಡ್ ಪಡೆಯುವುದು ಕಡ್ಡಾಯ ಎಂದರು.
ಈ ಸಂದರ್ಭದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯುದ ಮೇಲ್ವಿಚಾರಕಿ ಮಾದೇವಿ, ಶಿಕ್ಷಕಿ ಚಂದ್ರಮತಿ, ದಲಿತ ಮುಖಂಡ ಲಕ್ಷ್ಮಣ ಕೀರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement