ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲೋಕಸಭಾ ಕಣಕ್ಕೆ ಶ್ರೀರಾಮಸೇನೆ ಅಧ್ಯಕ್ಷ

Vishwanath S
Updated On : 15 Mar 2014, 12:58 pm

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಲ್ಲಿ ಬಿ.ಬಿ. ಶಿವಪ್ಪನವರಿಗೆ ನೀಡದ ಕಾರಣ ಪರ್ಯಾಯವಾಗಿ ಶ್ರೀರಾಮಸೇನೆಯಿಂದ ತಾನು ಕಣಕ್ಕಿಳಿಯುವುದಾಗಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಪ್ಪ ಅನುಭವಿ ಹಾಗೂ ಸ್ನೇಹ ಜೀವಿಯಾಗಿದ್ದು, ಅವರು ಲೋಕಸಭಾ ಚುನಾವಣೆಗೆ ಅರ್ಹ ಹಾಗೂ ಸಮರ್ಥ ಅಭ್ಯರ್ಥಿ. ಅವರಿಗೆ ಯುವಕರು ಸೇರಿದಂತೆ ಜಿಲ್ಲೆಯ ಜನರ ಸಂಪೂರ್ಣವಾದ ಬೆಂಬಲವಿದೆ. ಚುನಾವಣೆಯಲ್ಲಿ ದಿಟ್ಟ ಎದುರೇಟನ್ನು ಅವರು ನೀಡಲಿದ್ದಾರೆ. ಆದ್ದರಿಂದ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ನಾಯಕರನ್ನು ಭೇಟಿ ಮಾಡಿದರೆ ತಮ್ಮ ವಿರುದ್ಧ ಏಕ ವಚನದಲ್ಲಿ ಮಾತನಾಡಿ ಅವಮಾನಗೊಳಿಸಿದ್ದಾರೆ ಎಂದು ಆರೋಪಿಸಿದರು.
ದುರ್ಬಲರಿಗೆ ಟಿಕೆಟ್: ಜಿಲ್ಲೆಯಲ್ಲಿ ದೇವೇಗೌಡರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇರುವುದು ಬಿ.ಬಿ. ಶಿವಪ್ಪನವರಿಗೆ ಮಾತ್ರ. ಈಗ ವಿಜಯ್ ಶಂಕರ್ ಅವರಿಗೆ ನೀಡಿದ್ದಾರೆ. ಆದರೆ, ಅವರು ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಈಗ ನಗರಸಭೆ ಚುನಾವಣೆಯಲ್ಲಿ ನಿಂತರೂ ಗೆಲ್ಲಲು ಶಕ್ತಿ ಇಲ್ಲದಂತಹವರಿಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಕಾರ್ಯಕರ್ತರಿಗೆ ವಂಚನೆ: ಶಿವಪ್ಪನವರಿಗೆ ಟಿಕೆಟ್ ನೀಡಿ ಎಂದು ಕೇಳಿದರೆ ಏಕವಚನದಲ್ಲಿ ಉತ್ತರಿಸಿ ಅವಮಾನಗೊಳಿಸುತ್ತಾರೆ ಎಂದ ಅವರು, ಧೈರ್ಯವಿಲ್ಲದೆ ಈಶ್ವರಪ್ಪ ಹಾಗೂ ಸಿ.ಟಿ. ರವಿ ಬಂದು ಹಾಸನದಲ್ಲಿ ನಿಂತು ತೋರಿಸಲಿ ಎಂದು ಸವಾಲು ಹಾಕಿದ ಅವರು, ಕಾರ್ಯಕರ್ತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೌದ್ರಳ್ಳಿ ಕುಮಾರ್, ರಂಗನಾಥ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement