ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಓದುಗರಿಗೆ ಸಮರ್ಪಕ ಸೇವೆ ಗ್ರಂಥಾಲಯಾಧಿಕಾರಿ ಸ್ಪಷ್ಟನೆ

Vishwanath S
Updated On : 17 Mar 2014, 1:29 am

ಹಾಸನ: ಸಕಲೇಶಪುರ ತಾಲೂಕಿನ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳು ಹಾಗೂ ಶಾಖಾ ಗ್ರಂಥಾಲಯವು  ಸರಿಯಾದ ಸಮಯಕ್ಕೆ ಸಾರ್ವಜನಿಕ ಓದುಗರಿಗೆ ಸೇವೆ ಒದಗಿಸುತ್ತಿವೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ (ಪ್ರಭಾರ) ತಿಳಿಸಿದ್ದಾರೆ.  ತಾಲೂಕಿನ ಗ್ರಂಥಾಲಯಗಳ ಅಸಮರ್ಪಕ ನಿರ್ವಹಣೆಯಿಂದ  ಓದುಗರಿಗೆ ತೊಂದರೆ ಎಂಬುದು  ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನಲ್ಲಿ 26 ಗ್ರಾಮ ಪಂಚಾಯ್ತಿಗಳು ಕಾರ್ಯ ನಿರ್ವಹಿಸುತ್ತಿವೆ. ಸಮಯಕ್ಕೆ  ಮುಖ್ಯ ಗ್ರಂಥಾಲಯಾಧಿಕಾರಿಗಳು ಹಾಗೂ  ಕಚೇರಿ ಸಿಬ್ಬಂದಿ ಎಲ್ಲಾ ಗ್ರಾಪಂ ಗ್ರಂಥಾಲಯಗಳಿಗೆ ಭೇಟಿ ನೀಡಿ  ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದು  ಹೇಳಿದ್ದಾರೆ. ಪರಿವೀಕ್ಷಣೆ ಸಮಯದಲ್ಲಿ  ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ಕಾರ್ಯ ನಿರ್ವಹಣೆ ಕುರಿತು  ಸಂಬಂಧಪಟ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ಅಲ್ಲಿನ ಸಿಬ್ಬಂದಿಯೊಂದಿಗೆ ಹಾಗೂ ಸಾರ್ವಜನಿಕ ರೊಂದಿಗೆ ವಿಚಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.  ಗ್ರಂಥಾಲಯ ಕೆಲಸದ ವೇಳೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ,  ಮಧ್ಯಾಹ್ನ 3 ರಿಂದ  ಸಂಜೆ 6 ರವರೆಗೆ ಇದ್ದು,  ಕೆಲಸದ ವೇಳೆಯನ್ನು ಗ್ರಂಥಾಲಯಗಳಲ್ಲಿ ನಮೂದಿಸಲಾಗಿದೆ. ಯಾವುದೇ  ಸಮಯದಲ್ಲಿ  ಸಾರ್ವಜನಿಕರಿಂದ ಗ್ರಂಥಾಲಯ ಮೇಲ್ವಿಚಾರಕರ ಕಾರ್ಯ ನಿರ್ವಹಣೆ ಬಗ್ಗೆ ಯಾವುದೇ ಮೌಖಿಕ ಅಥವಾ  ಲಿಖಿತ ದೂರುಗಳು ಬಂದಲ್ಲಿ ತಕ್ಷಣವೇ ಗ್ರಾಪಂ ಗ್ರಂಥಾಲಯಗಳಿಗೆ  ಭೇಟಿ ಪರಿಶೀಲಿಸಿ,  ತಪ್ಪಿತಸ್ಥ ಮೇಲ್ವಿಚಾರಕರ  ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸಕಲೇಶಪುರ ಶಾಖಾ ಗ್ರಂಥಾಲಯಕ್ಕೆ  ಉಚಿತವಾಗಿ ಒಂದು ಕಟ್ಟಡ ಅಥವಾ ನಿವೇಶನವನ್ನು ನೀಡುವಂತೆ  ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ  ಹಾಗೂ ಅಧ್ಯಕ್ಷರಿಗೆ  ಪತ್ರ  ಬರೆಯಲಾಗಿದೆ ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿಗಳು  ಸಕಲೇಶಪುರ ತಾಲೂಕಿನಗೆ  ಭೇಟಿ ನೀಡಿದ ಸಮಯದಲ್ಲಿ  ಹಲವು ಬಾರಿ ಪುರಸಭೆ ಅಧಿಕಾರಿಗಳೊಂದಿಗೆ, ಅಧ್ಯಕ್ಷರೊಂದಿಗೆ  ಹಾಗೂ ತಹಸೀಲ್ದಾರ್ ಅವರನ್ನು ಭೇಟಿ ನೀಡಿ  ಚರ್ಚಿಸಿ ಈ ವಿಷಯದ ಕುರಿತು ಮನವಿ  ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಹಾಸ್ಟೆಲ್‌ನ್ನು ಸದ್ಯದಲ್ಲಿ  ಹೊಸ ಕಟ್ಟಡಕ್ಕೆ  ವರ್ಗಾಯಿಸಿದ ನಂತರ ಈ ಕಟ್ಟಡವನ್ನು  ಶಾಖಾ ಗ್ರಂಥಾಲಯಕ್ಕೆ  ಕಾರ್ಯ ನಿರ್ವಹಣೆಗಾಗಿ  ಬಿಟ್ಟುಕೊಡಬೇಕಾಗಿ,  ತಾಲೂಕು  ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ  ಭೇಟಿ  ಮಾಡಿ ಮನವಿ ಸಲ್ಲಿಸಲಾಗಿದೆ.  ಅವರಿಂದ  ಕಟ್ಟಡ ದೊರೆತ  ನಂತರ ಸಕಲೇಶಪುರ ಗ್ರಂಥಾಲಯವನ್ನು ಅಲ್ಲಿಗೆ  ವರ್ಗಾಯಿಸಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement