ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನರಸೀಪುರ ಮರಳು ಮಾಫಿಯಾ ತಾಣ: ಶಶಿಕಾಂತ್ ಆರೋಪ

Vishwanath S
Updated On : 17 Mar 2014, 1:30 am

ಟಿ. ನರಸೀಪುರ: ಮರಳು ದಂಧೆಯಿಂದ ನರಸೀಪುರ, ಮುಂಬೈ ಮತ್ತು ಬೆಂಗಳೂರು ಮಾಫಿಯಾ ತಾಣವಾಗುತ್ತಿವೆ ಎಂದು ಕರ್ನಾಟಕ ಭ್ರಷ್ಟಾಚಾರ ವಿರೋಧಿ ಸಮಿತಿ ರಾಜ್ಯಾಧ್ಯಕ್ಷ ಎಸ್.ಆರ್. ಶಶಿಕಾಂತ್ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕಾವೇರಿ ನದಿ ಪಾತ್ರದುದ್ದಕ್ಕೂ ವ್ಯಾಪಕವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ನಿರಂತರವಾಗಿ ನಡೆಯುತ್ತಿರುವ ದಂಧೆಗೆ ಘರ್ಷಣೆ ಮೆರಗು ನೀಡುತ್ತಿರುವುದರಿಂದ ಮಾಫಿಯಾ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಂಡವಾಳ ಶಾಹಿಗಳು ಅಧಿಕಾರಿಗಳನ್ನು ಒಳಒಪ್ಪಂದ ಮಾಡಿಕೊಂಡು, ಸಂಘಟನೆಗಳನ್ನೇ ಎತ್ತಿಕಟ್ಟಿ ಗುಂಪುಗಾರಿಕೆ ಮಾಡಿ, ಮರಳು ಕದ್ದು ಸಾಗಿಸುವ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯವಾಗಿ ಅಶಾಂತಿ ಸೃಷ್ಟಿಸಿ ಮುಂಬೈ ಮಾಡಲು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮರಳು ಮಾಫಿಯಾಕ್ಕೆ ಕಡಿವಾಣ ಹಾಕದಿದ್ದರೆ, ಪ್ರವಾಸಿ ಕೇಂದ್ರವಾಗಿರುವ ನರಸೀಪುರ ರೌಡಿ  ಗೂಂಡಾಗಳ ಅಡಗುತಾಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.ಮರಳು ದಂಧೆಗೆ ಕುಮ್ಮಕ್ಕು ನೀಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಸರ್ಜರಿ ಮಾಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ವರ್ಗಾವಣೆ ಮಾಡಬೇಕು. ಲಾರಿ ಮಾಲೀಕರಲ್ಲದವರೂ ಪರ್ಮಿಟ್ ಪಡೆದುಕೊಂಡು ನಕಲೀಕರಿಸುವುದನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದರು.
ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ಭ್ರಷ್ಟಚಾರ ವಿರೋಧಿ ಸಮಿತಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹದೇವ (ಗೌರವಾಧ್ಯಕ್ಷ), ಕೆ.ಎಂ. ಮಂಜುನಾಥ್(ಅಧ್ಯಕ್ಷ), ದಿನೇಶ್, ಲಿಂಗರಾಜು (ಪ್ರ.ಕಾರ್ಯದರ್ಶಿ), ಮಂಜುನಾಥ್
 (ಕಾರ್ಯದರ್ಶಿ), ಪವನ್ (ಖಜಾಂಚಿ), ಚಿನ್ನಸ್ವಾಮಿ (ಸಂ.ಕಾರ್ಯದರ್ಶಿ), ಸೋಮಣ್ಣ, ಶಾಂತ ನಾಗರಾಜು (ಕಾನೂನು ಸಲಹೆಗಾರರು), ಎಸ್. ನಂಜುಂಡಯ್ಯ, ಕೆ.ಪಿ. ಕಾಂತರಾಜು, ಎಂ.ರಾಜು, ಚಿಕ್ಕಮಾದಪ್ಪ (ಹಿರಿಯ ಸಲಹೆಗಾರರು), ಕರುಣಮೂರ್ತಿ, ಮುನಿರಾಜು (ನಿರ್ದೇಶಕ) ಅವನನ್ನು ನೇಮಕ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement