ಕಾಂಗ್ರೆಸ್- ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು
ಬೇಲೂರು: ಕುಟುಂಬ ರಾಜಕಾರಣ ಮಾಡುವ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಒಂದೇ ನಾಣ್ಯದ ಎರಡು ಮಖಗಳಿದ್ದಂತೆ. ಹಾಗಾಗಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಜನ ಬಯಸಿದ ಹಾಗೆ, ವಂಶ ಪಾರಂಪರ್ಯ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ಲೋಕಸಭಾ ಜಯಭೇರಿ ಬಾರಿಸುತ್ತದೆ ಎಂದು ತಿಳಿಸಿದರು.
ಭಾರತದ ಮುಂದಿನ ರಾಷ್ಟ ರಾಜಕಾರಣದಲ್ಲಿ ಪ್ರಧಾನಮಂತ್ರಿ ಮೋದಿ ಅವರೇ ಆಗುತ್ತಾರೆಂಬ ವಿಶ್ವಾಸ ನಮ್ಮಲ್ಲಿದ್ದು ಗುಜರಾತ್ ಮಾದರಿಯಲ್ಲಿ ಇಡೀ ರಾಷ್ಟ ಅಭಿವೃದ್ಧಿ ಆಗುತ್ತದೆ. ಅದಕ್ಕಾಗಿ ಭ್ರಷ್ಟ ಕಾಂಗ್ರೆಸ್ಸನ್ನು ತೊಲಗಿಸಿ, ಬಿಜೆಪಿಯನ್ನು ಕೇಂದ್ರದಲ್ಲಿ ಆಧಿಕಾರಕೊಡಬೇಕು. ಅದಕ್ಕಾಗಿ ನಾವು ಸಮರ್ಥ ಅಭ್ಯರ್ಥಿಯನ್ನು ಹಾಸನ ಲೋಕಸಭಾ ಚುನಾವಣೆಗೆ ನಿಲ್ಲಿಸಲಾಗುತ್ತದೆ ಎಂದರು.
ಕೆಲಸಗಳು ಆಗಿಲ್ಲ: ದೇವೇಗೌಡರು 6 ತಿಂಗಳಿಂದ ಒಣಗಿದ ತೆಂಗಿನ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತು ಅದನ್ನು ಕಾರ್ಯಗತ ಮಾಡಲು ಅವರಿಂದ ಸಾಧ್ಯವಾಗಿಲ್ಲ. ತೆಂಗು ಅಭಿವೃದ್ಧಿ ಮಂಡಳಿ ಪುನಶ್ಚೇತನಗೊಳಿಸಲು ಜಿಲ್ಲೆಯಲ್ಲಿ ರಾಷ್ಟೀಯ ಹೆದ್ದಾರಿ ರಸ್ತೆಗಳ ಬಗ್ಗೆ ಹಣ ಬಿಡುಗಡೆ ಮಾಡಲಿಲ್ಲ ಹಾಗೂ ಹಾಸನದ ಏರ್ ಟ್ರಾಫಿಕ್ ಕಂಟ್ರೋಲರ್ ಚಂದ್ರಶೇಖರ್ ಅವರನ್ನು ಕರೆದು ಶಂಕುಸ್ಥಾಪನೆ ಮಾಡಿದ ಮಾಜಿ ಪ್ರದಾನಮಂತ್ರಿ ದೇವೇಗೌಡರು ಅಡಿಗಲ್ಲು ಹಾಕಿದ್ದು ಬಿಟ್ಟರೆ, ಈವರೆಗೂ ಅದರ ಬಗ್ಗೆ ಚಕಾರ ಎತ್ತಿಲ್ಲ ಎಂದು ಹೇಳಿದರು.
ಹಣ ನೀಡಿದರು: ವಿಶೇಷವಾಗಿ, ಬೇಲೂರು ಹಳೇಬೀಡು ಮಾದಿಹಳ್ಳಿ ಯೋಜನೆಗಳು ಯಾವ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ, ಅದಿಕಾರದಲ್ಲಿದ್ದಾಗ ಬಿಜೆಪಿ ಹೋರಾಟ ಮಾಡಿ ನೀರು ತರುತ್ತೇವೆ ಎಂದು ಮಾಜಿ ಮಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಬೇಲೂರು ಹಳೇಬೀಡು ಮಾದಿಹಳ್ಳಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ನೀಡಿದರು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಮೆಡಿಕಲ್ ರಾಜಣ್ಣ, ರಮೇಶ್, ಜಯಲಿಂಗಪ್ಪ ಯೋಗೀಶ್ ಇತರರು ಇದ್ದರು.