ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಟ್ರಾಫಿಕ್ ವಾರ್ಡನ್‌ಗಳ ನೇಮಕ

Mainashree
Updated On : 17 Mar 2014, 11:58 am

ಬೇಲೂರು:  ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ವ್ಯವಸ್ಥಿತ ಸಂಚಾರಕ್ಕಾಗಿ ಟ್ರಾಫಿಕ್ ವಾರ್ಡನ್‌ಗಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಇಲ್ಲಿನ ಪುಟ್ಟಮ್ಮ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಟ್ರಾಫಿಕ್  ವಾರ್ಡನ್ ಉದ್ಘಾಟನಾ ಸಮಾರಂಭದಲ್ಲಿ “Èæà×ÚOæ¾ÚßÅæÇÞ ~¦§Â’ ಎಂಬ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಪುಸ್ತಕ ಬಿಡುಗಡೆ ಮಾಡಿ ನಂತರ ಅವರು ಮಾತನಾಡಿದರು.
ಈವರೆಗೆ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಸ್ಥಳದಲ್ಲೇ ದಂಡ ವಿಧಿಸುವ ನಿಯಮವಿತ್ತು. ಇದೀಗ ಇದರ ಜತೆ ವಾಹನದ ನಂಬರ್ ಬರೆದುಕೊಂಡು ಮನೆಯ ಬಳಿಗೆ ಕೊರಿಯರ್ ಮೂಲಕ ನೋಟೀಸ್ ನೀಡಿ ಅಥವಾ ದಂಡ ಕಟ್ಟಿಸಿಕೊಳ್ಳುವ ಪದ್ಧತಿ ಜಾರಿಗೊಳಿಸಲಾಗುವುದು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಟ್ರಾಫಿಕ್ ವಾರ್ಡನ್‌ಗಳಿಗೆ ಕ್ಯಾಮರಾ ನೀಡಲಾಗುವುದು ಎಂದರು.
2 ಗಂಟೆ ಕೆಲಸ: ಈಗಾಗಲೇ ಹಾಸನದಲ್ಲಿ 40 ಜನ ಟ್ರಾಫಿಕ್ ವಾರ್ಡನ್‌ಗಳಿದ್ದು, ಬೇಲೂರಿನಲ್ಲಿ 25 ವಾರ್ಡನ್‌ಗಳ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿನ ವೈ.ಡಿ.ಡಿ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಈ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಉಚಿತವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆರಂಭದಲ್ಲಿ 10 ದಿನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ನಂತರ, ನಿಯಮಾನುಸಾರ ಕರ್ತವ್ಯ ನಿರ್ವಹಣೆ ಆಗಲಿದೆ ಎಂದರು.
ಹಂತಹಂತವಾಗಿ ವಿಸ್ತರಣೆ: ಟ್ರಾಫಿಕ್ ವಾರ್ಡನ್ ವ್ಯವಸ್ಥೆಯನ್ನು ಹಂತ ಹಂತವಾಗಿ ಅರಸೀಕೆರೆ, ಸಕಲೇಶಪುರ, ಚನ್ನರಾಯಪಟ್ಟಣಕ್ಕೂ ವಿಸ್ತರಿಸಲಾಗುವುದು. ಮುಂಬರುವ ದಿನದಲ್ಲಿ ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ ಘಟಕದಂತೆ ಟ್ರಾಫಿಕ್ ವಾರ್ಡನ್ ಘಟಕಗಳ ಆರಂಭಿಸಲು ಯೋಜಿಸಲಾಗಿದೆ. ಬೇಲೂರಿನಲ್ಲಿ ಲೈಸೆನ್ಸ್ ಇಲ್ಲದವರಿಗೆ 3 ದಿನದಲ್ಲಿ ಲೈಸನ್ಸ್ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸಿಪಿಐ ಗಣೇಶ್ ಮಾಹಿತಿ ನೀಡಿದರು. ಹಾಸನ ಟ್ರಾಫಿಕ್ ವಾರ್ಡನ್ ಸೂಪರಿಂಟೆಂಡೆಂಟ್, ನಾಗೇಶ್, ಪಿಎಸ್‌ಐ ಅಶ್ವಿನ್ ಕುಮಾರ್ ಇದ್ದರು. ಸೂಪರಿಡೆಂಟ್ ನಾಗೇಶ್, ಟ್ರಾಫಿಕ್ ವಾರ್ಡನ್‌ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಟ್ರಾಫಿಕ್ ವಾರ್ಡನ್‌ಗಳ ನೇಮಕದ ವಿಷಯದಲ್ಲಿ ಸಹಕಾರ ನೀಡಿದ ರೋಟರಿ ಸಂಸ್ಥೆಯ ಅಂಜುಮ್, ಗುತ್ತಿಗೆದಾರ ತೌಫಿಕ್ ಅಹದ್, ಭರತ್ ಅವರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement