ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಿಡಿಒ ವರ್ತನೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

Mainashree
Updated On : 18 Mar 2014, 12:00 pm

ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಉದ್ಯೋಗ ಖಾತರಿ ಯೋಜನೆಯಡಿ ಮುಗಿದಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತಾರತಮ್ಯ ಎಸಗುತ್ತಿದ್ದಾರೆ ಎಂದು  ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರಪ್ಪ ನೇತೃತ್ವದಲ್ಲಿ ಶಶಿವಾಳ ಗ್ರಾಮಸ್ಥರು ಇತ್ತೀಚೆಗೆ ರಾಂಪುರ ಗ್ರಾಮಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಇಲ್ಲಿಗೆ ಸಮೀಪದ ರಾಂಪುರ ಗ್ರಾಮ ಪಂಚಾಯ್ತಿ  ವ್ಯಾಪ್ತಿಗೆ ಸೇರಿದ ಶಶಿವಾಳ ಗ್ರಾ ಮ ಪಂಚಾಯಿತಿ ಸದಸ್ಯ ಗಂಗಾಧರಪ್ಪ ಹಾಗೂ ಗ್ರಾಮಸ್ಥರಾದ ಮರು ಳಸಿದ್ದ, ಬಸವರಾಜಪ್ಪ, ಚನ್ನೇಗೌಡ, ವಿಜಯಕುಮಾರ್  ಹಾಗೂ ಎಸ್.ಟಿ. ಧನಂಜಯ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಿಡಿಓ ಕಾರ್ಯ ವೈಖರಿ ಖಂಡಿಸಿ ಮತ್ತು ಸರ್ವಾಧಿಕಾರಿ ಧೋರಣೆಗೆ ಬೇಸತ್ತು  ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹೊರ ಕಳುಹಿಸಿ ಬೀಗ ಹಾಕಿದರು.
ಆಕ್ರೋಶ: ಗ್ರಾಮ ಪಂಚಾಯ್ತಿ ಸದಸ್ಯ ಗಂಗಾಧರಪ್ಪ ಮಾತನಾಡಿ, ತಾಲೂಕಿನ ಕಸಬಾ ಹೋಬಳಿ ಹಬ್ಬನಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಕುಮಾರಸ್ವಾಮಿ ರಾಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನಗೆ ಹಣ ಕೊಟ್ಟವರಿಗೆ ಮಾತ್ರ ಬಿಲ್ ಬರೆದು, ಚೆಕ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಶಶಿವಾಳ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿರುವ ಫಲಾನುಭವಿಗಳಿಗೆ ಜಾಬ್ ಕಾರ್ಡ್‌ಗೆ, ಬ್ಯಾಂಕ್‌ಗೆ ಹಣ ಹಾಕಿಲ್ಲ. ಆದರೆ ಅದೇ ರಾಂಪುರ ಗ್ರಾಮದ ಕೆಲವು ಫಲಾನುಭವಿಗಳಿಗೆ  ಮತ್ತು ಹಣ ಕೊಟ್ಟವರಿಗೆ  ಮನೆಗೆ ಕಂಪ್ಯೂಟರ್ ತೆಗೆದುಕೊಂಡು ಹೋಗಿ  ಮಧ್ಯರಾತ್ರಿಯವರೆಗೆ ಬಿಲ್‌ಗಳನ್ನು ಬರೆದು ರು. 1,67,388 ಮೊತ್ತದ ಹಣವನ್ನು ಅವರವರ ಜಾಬ್‌ಕಾರ್ಡ್‌ನ ಖಾತೆಗೆ ಜಮಾ ಮಾಡಿದ್ದಾರೆ ಎಂದು ಅವರು ಅಧಿಕಾರಿ ವಿರುದ್ಧ ಕಿಡಿಕಾರಿದರು.
ಹೊಳಲ್ಕೆರೆ ರಸ್ತೆಯ ಎರಡು ಕಾಮಗಾರಿಗಳಿಗೆ ಒಟ್ಟು ರು. 2 ಲಕ್ಷ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕಳೆದ 3 ತಿಂಗಳಿಂದಲೂ ಶಶಿವಾಳ ಗ್ರಾಮದಲ್ಲಿ ಕುಡಿ ಯುವ ನೀರಿಲ್ಲದೇ ಜನ ಹಾಹಾಕಾರಪಡುತ್ತಿದ್ದು, ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯನ್ನು ಪ್ರಶ್ನಿಸಿದರೆ, ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement