ಮಹಿಳೆಯರ ಪ್ರತಿಭಟನೆ
ಹಳೇಬೀಡು: ಗ್ರಾಮದಲ್ಲಿನ ಕುಡಿ ಯುವ ನೀರಿನ ಸಮಸ್ಯೆ ಖಂಡಿಸಿ ಹಳೇಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಮಹಿಳೆಯರು ಪಟ್ಟಣದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಇತ್ತೀಚೆಗೆ ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿನ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಕ್ಷೇತ್ರದ ಶಾಸಕ ವೈ. ಎನ್. ರುದ್ರೇಶಗೌಡ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿಗೆ ಅರ್ಜಿ ಕೊಟ್ಟರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದರು.
ಆದೇಶ: ಈ ಬಗ್ಗೆ ಬೇಲೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಸವಣ್ಣ ಐಯಣ್ಣನವರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಹಾಲಿ ಬಿದುರುಕೆರೆ ಹತ್ತಿರ ನರಸೀಪುರಕ್ಕೆ ಕೊರೆದಿರುವ ಬಾವಿ ಉಪಯೋಗ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯ್ತಿಗೆ ಆದೇಶಿಸಿದರು. ಈ ಭರವಸೆ ಹಿನ್ನೆಲೆಯಲ್ಲಿ ಮಹಿಳೆಯರು ಪ್ರತಿಭಟನೆ ಹಿಂಪಡೆದರು. ಪಂಚಾಯ್ತಿ ಸದಸ್ಯ ಗಂಗಾಧರ್, ಸೋಮಶೇಖರ್, ಸಿದ್ದಲಿಂಗಪ್ಪ, ಶಾಂತಪ್ಪ, ಗುರುವಣ್ಣ ಹಾಗೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.