ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈಭವದ ಭದ್ರಕಾಳಿ ವೀರಭದ್ರೇಶ್ವರ ರಥೋತ್ಸವ

Mainashree
Updated On : 18 Mar 2014, 12:00 pm

ಬೇಲೂರು: ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದ ಹುಲ್ಲೇನಹಳ್ಳಿ ಸಮೀಪದ  ಭದ್ರಕಾಳಿ ಬನದ ಶ್ರೀ ವೀರಭದ್ರೇಶ್ವರಸ್ವಾಮಿಯ ಭಾನುವಾರ ದಿವ್ಯ ರಥೋತ್ಸವ ನಡೆಯುವ  ಮೂಲಕ ಭಕ್ತರ ಭಕ್ತಿ ಮೆರೆದರು.
ಶನಿವಾರದಿಂದಲೇ ಆರಂಭವಾದ ಜಾತ್ರಾ ಮಹೋತ್ಸವಕ್ಕೆ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ನಂತರ ಗಂಗಾಪೂಜೆ, ರುದ್ರಾಭಿಷೇಕ, ಶತ ರುದ್ರಪೂಜೆ, ಹವನ ಹೋಮ ಸೇರಿದಂತೆ ನಾನಾ ಪೂಜೆಗಳು ನಡೆದವು.
ಓಕುಳಿ ಕಾರ್ಯಕ್ರಮ: ಸೋಮವಾರ ಬೆಳಗ್ಗೆ ವೀರಭದ್ರೇಶ್ವರಸ್ವಾಮಿ ಕೆಂಡೋತ್ಸವ ನಡೆಯಿತು. ನಂತರ, ಸ್ವಾಮಿಯನ್ನು  ರಥದಲ್ಲಿ ಕುಳ್ಳಿರಿಸಿ ರಥೋತ್ಸವ ಆಚರಿಸಿದರು.
 ರಥೋತ್ಸವದ ನಂತದ ಹೋಳಿ ಹುಣ್ಣುಮೆ ಅಂಗವಾಗಿ ಸ್ವಾಮಿ ದೇವಾಲಯದ ಬಳಿ ಓಕುಳಿ ಎರಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಕಾಳಿ ಬನದ ಕಾರ್ಯನಿರ್ವಾಹಕ ಅಧಿಕಾರಿ ಬಿ. ಶಿವರುದ್ರಪ್ಪ, ದೇವಾಲಯ ಮುಖ್ಯಸ್ಥ ಹುಲ್ಲೇನಹಳ್ಳಿ ಸಿದ್ದುರಾಜು, ಚನ್ನೇಗೌಡ, ರೇವಣ್ಣಯ್ಯ ಹಳೇಬೀಡು ಕಾಂತರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement