ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕನ್ನಡಿಗರು ಪ್ರತಿಭಾವಂತರು: ಹಂಸರಾಜ್ ಮೆಚ್ಚುಗೆ

Mainashree
Updated On : 18 Mar 2014, 11:53 am

ಹಾಸನ: ಕರ್ನಾಟಕದ ಜನತೆ ಪ್ರತಿಭಾವಂತರಾಗಿದ್ದು, ಸಾಕಷ್ಟು ಮಹಾನ್ ವ್ಯಕ್ತಿಗಳು ಇಲ್ಲಿ ಹುಟ್ಟಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭರದ್ವಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ ವಿದ್ಯುತ್ ಕರ್ನಾಟಕಕ್ಕೆ ತಂದ ಖ್ಯಾತಿವೆತ್ತ ಸರ್. ಎಂ. ವಿಶ್ವೇಶ್ವರಯ್ಯ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೆಂಕಟರಾಮಯ್ಯ ಅವರಂಥ ಮಹಾನ್ ವ್ಯಕ್ತಿಗಳು ಇಲ್ಲಿ ಜನಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆದ್ದರಿಂದ, ಈ ರಾಜ್ಯದ ಬಗ್ಗೆ ನನಗೆ ಅಭಿಮಾನವಿದೆ. ಅದೇ ರೀತಿ ಕನ್ನಡ ಭಾಷೆಯ ಮೇಲೂ ಅಭಿಮಾನವಿದೆ ಎಂದರು.
ಅರ್ಥ ಮಾಡಿಕೊಳ್ಳಬಲ್ಲೆ: ನನ್ನ ಅಧಿಕಾರಾವಧಿಯಲ್ಲಿ ಕನ್ನಡ ಕಲಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ ರಾಜ್ಯಪಾಲರು, ಕನ್ನಡ ಈಗೀಗ ನನಗೆ ಅರ್ಥವಾಗುತ್ತಿದೆ. ಆದರೆ, ಮಾತನಾಡಲು ಬರುವುದಿಲ್ಲ. ಇಷ್ಟು ದಿನಗಳ ಒಡನಾಟದಲ್ಲಿ ಈ ಭಾಷೆ ಶಕ್ತಿಯುತ ಎನ್ನುವುದನ್ನು ಅರಿತಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement