'ಜನಪ್ರತಿನಿಧಿಗಳು ಸನ್ಯಾಸ ಸ್ವೀಕರಿಸಲಿ'
ಹಾಸನ: ಜನಪ್ರತಿನಿಧಿಗಳು ಮಾತಿನ ಭರವಸೆ ನೀಡದೆ ಮಳೆಗಾಲದ ಒಳಗೆ ಕೂಡಲೇ ದುದ್ದ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲಿ, ಇಲ್ಲದಿದ್ದರೆ ಸನ್ಯಾಸ ಸ್ವೀಕರಿಸಲಿ ಸಿಎಂಎಸ್ಎಸ್ ಸೇವಾ ಕೇಂದ್ರದ ಸಮಾಜ ಸೇವಕ ವಿನ್ಸೆಂಟ್ ಸೆಕ್ವೇರಾ ಹೇಳಿದ್ದಾರೆ. ದುದ್ದ ರಸ್ತೆ ಕಾಮಗಾರಿ ಮುಗಿಸುವ ಇಚ್ಛಾಶಕ್ತಿಯಿಂದ ಕೆಲಸ ಪ್ರಾರಂಭಿಸಿದರೆ ನಿಮ್ಮನ್ನು ನಿಜವಾದ ಜನನಾಯಕರು ಎಂದು ಒಪ್ಪಿಕೊಳ್ಳುತ್ತೇವೆ. ಇಲ್ಲವಾದಲ್ಲಿ, ಸಾರ್ವಜನಿಕ ಸೇವೆಗೆ ನೀವು ನಾಲಾಯಕ್ಕು ಎಂದು ತೀರ್ಮಾನಿಸಿಕೊಂಡು ಸನ್ಯಾಸ ಸ್ವೀಕರಿಸಲು ಯೋಗ್ಯ ಎಂದರು.
ಸಮಸ್ಯೆಗಳನ್ನು ಚೆನ್ನಾಗಿ ಅರಿತಿರುವ ಜನ ನಾಯಕರು, ಅಧಿಕಾರಿಗಳು ನಿಜವಾದ ಸಾಮಾಜಿಕ ಕಾಳಜಿ, ಪ್ರಾಮಾಣಿಕತೆ ಇದ್ದರೆ ಈ ಕೂಡಲೇ ಮಾತಿನ ಭರವಸೆ ನೀಡದೆ ಮಳೆಗಾಲದ ಒಳಗೆ ಕಾಮಗಾರಿ ಮುಗಿಸುವಂತೆ ಮನವಿ ಮಾಡಿದರು.
--