ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೊಡ್ಡಮೇಟಿಕುರ್ಕೆಯಲ್ಲಿ ನೀರಿಗಾಗಿ ಪ್ರತಿಭಟನೆ

Mainashree
Updated On : 18 Mar 2014, 11:53 am

ಅರಸೀಕೆರೆ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ಗ್ರಾಮ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಕಚೇರಿ ಆವರಣದಲ್ಲೇ ಧರಣಿ ನಡೆಸಿದ ಅವರು, ಖಾಲಿ ಕೊಡ ಪ್ರದರ್ಶಿಸಿ ತಮ್ಮ ಅಸಹನೆ ತೋರ್ಪಡಿಸಿದರು. ನೂರಾರು ಮಹಿಳೆಯರೂ ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ತಾಪಂ ಸದಸ್ಯರೂ ಸೇರಿಕೊಂಡಿದ್ದು ವಿಶೇಷವಾಗಿತ್ತು.
ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಆರ್. ಶಿವಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮಸ್ಥರು ಪಂಚಾಯಿತಿ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಶಿವಕುಮಾರ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪ್ರತಿನಿತ್ಯ ಮಹಿಳೆಯರು  ಹಾಗೂ ಯುವಕರು ನೀರು ಬರುವ ಕಾಯಕದಲ್ಲಿಯೇ ಕಾಲ ಕಳೆಯುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಮನವಿ ಪ್ರಯೋಜನವಾಗಿಲ್ಲ: ಗ್ರಾಮದಲ್ಲಿ ಸುಮಾರು 10 ಕೊಳವೆ ಬಾವಿಗಳಿದ್ದರೂ ಆ ಪೈಕಿ ಒಂಭತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ. ಉಳಿದಿರುವ ಒಂದು ಕೊಳವೆ ಬಾವಿ ನೀರಿನಲ್ಲಿ ಜನರು ನೀರು ಪಡೆಯಬೇಕಿದೆ. ಅಲ್ಲದೇ, ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರು ಪೂರೈಕೆ ಘಟಕದಲ್ಲಿಯೂ ಸಹ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಗ್ರಾಹಕರಿಗೆ ಎರಡು ದಿನಕ್ಕೊಮ್ಮೆ ನೀರು ವಿತರಿಸುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚೌಡಪ್ಪ, ಮಾಜಿ ಸದಸ್ಯ ಡಿ.ಪಿ. ಪಾಲಾಕ್ಷಮೂರ್ತಿ ಮುಖಂಡರಾದ ರೇವಣ್ಣ, ಶಿವಲಿಂಗಪ್ಪ, ಡಿ.ಎಸ್.ಎಸ್. ಮುಖಂಡ ಡಿ.ಕೆ. ಹರೀಶ್, ರೇವಣ್ಣ, ಮಹಿಳೆಯರಾದ ಲಲಿತಮ್ಮ, ಶಿವಮ್ಮ ಇತರರು ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement