ಭಜನಾ ಪ್ರಶಿಕ್ಷಣಾ ತರಬೇತಿ
ಅರಸೀಕೆರೆ: ಪಟ್ಟಣದ ವಾಸವಿ ಮಹಲ್‌ನ ಜ್ಞಾನಜ್ಯೋತಿ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸೇವಾ ಭಾರತೀ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಜನಾ ಪ್ರಶಿಕ್ಷಣ ವರ್ಗವನ್ನು ನಡೆಸಿಕೊಡುವ ಮೂಲಕ ಸಾಮೂಹಿಕ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವ ಬಗ್ಗೆ ಎಲ್ಲರಿಗೂ ತರಬೇತಿ ನೀಡಲಾಯಿತು.
ಈ ಶಿಬಿರದಲ್ಲಿ ಪಟ್ಟಣದ ಹರ್ಷ ವಿದ್ಯಾಪೀಠ, ಶ್ರೀ ಸಾಯಿನಾಥ ಸೇವಾ ಭಜನಾ ಮಂಡಲಿ, ಶ್ರೀನಿವಾಸ ನಗರದ ವಿನಾಯಕ ಭಜನಾ ಮಂಡಲಿ, ರಾಷ್ಟ್ರೀಯ ಸೇವಿಕಾ ಆಧ್ಯಾತ್ಮಿಕ ಸೇವಾ ಸಮಿತಿ, ವಾಸವಿ ಆಧ್ಯಾತ್ಮಿಕ ಸಂಘ, ಶಾಂಭವಿ ಭಜನಾ ಸಂಘ, ಮೈತ್ರಿ ಮಹಿಳಾ ಸಂಘ, ಲಲಿತ ಸಂಘ, ಚೈತನ್ಯ ಭಜನಾ ಮಂಡಲಿ, ವೀರಶೈವ ಮಹಿಳಾ ಭಜನಾ ಸಂಘ, ಸಿರಿಸಂಕುಲ ಸಂಘ, ಶ್ರೀರಾಮ ಭಜನಾ ಮಂಡಲಿ, ಜೈಭಾರತೀ ಸಂಘ, ಬ್ರಹ್ಮಚೈತನ್ಯ ಭಜನಾ ಮಂಡಲಿ, ಶ್ರೀಸಾಯಿ ಭಜನಾ ಮಂಡಲಿ, ಶ್ರೀಜ್ಞಾನೇಶ್ವರಿ ಭಜನಾ ಮಂಡಲಿ ಹಾಗೂ ಶ್ರೀಸೀತಾ ಮಹಿಳಾ ಸಂಘದ ನೂರಾರು ಮಹಿಳೆಯರು ಮತ್ತು ಪುರುಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಡಿಕೇರಿಯ ಸೇವಾ ಭಾರತೀ ಸಂಸ್ಥೆಯ ಭಜನಾ ಪ್ರಮುಖರಾದ ರವಿ. ಮತ್ತು ಸಂಗಡಿಗರು ಪ್ರಶಿಕ್ಷಣ ವರ್ಗವನ್ನು ನಡೆಸಿಕೊಡುವ ಮೂಲಕ ಸಾಮೂಹಿಕ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮ ಸಂಘಟಕ ಕೊ.ರಾ.ಶ್ರೀನಿವಾಸಮೂರ್ತಿ, ಕೆ.ಎನ್. ಸತ್ಯನಾರಾಯಣ, ಕೆ.ಎಸ್. ಕೃಷ್ಣ, ಪರಮೇಶ್, ಟಿ.ವಿ.ಅರುಣ್ ಕುಮಾರ್, ರಮೇಶ್, ಶಶಿಧರ್, ಪ್ರಕಾಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.