ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೃತ್ತಿಪರ ಶಿಕ್ಷಣಕ್ಕೆ ಸೀಮಿತವಾಗಬಾರದು

Mainashree
Updated On : 18 Mar 2014, 11:52 am

ಹಾಸನ: ವೃತ್ತಿಪರ ಶಿಕ್ಷಣವೊಂದಕ್ಕೇ ವಿದ್ಯಾರ್ಥಿಗಳು ಸೀಮಿತವಾಗದೆ ಕಲಾವಿಭಾಗದ ಕೋರ್ಸ್‌ಗಳಲ್ಲಿಯೂ ತಮ್ಮನ್ನು ತೊಡಗಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಐ.ಎಂ. ವಿಠ್ಠಲ ಮೂರ್ತಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಮೂರನೇ ವರ್ಷದ ಕಲಾ ಉತ್ಸವವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿಪರ ಕೋರ್ಸ್‌ಗಳಂತೆ ಕಲಾ ವಿಭಾಗಕ್ಕೂ ಪ್ರಾಮುಖ್ಯತೆ ಇದ್ದು, ಕಲಾ ವಿಭಾಗದಲ್ಲಿ ಪದವಿ ಪಡೆದವರನ್ನು ಕಡೆಗಣಿಸುವಂತಿಲ್ಲ. ನಾನು ಕೂಡ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದು ಸರ್ಕಾರದ ಉನ್ನತ ಸ್ಥಾನ ಏರಿದ್ದೆ. ಆದ್ದರಿಂದ, ಕಲಾ ವಿದ್ಯಾರ್ಥಿ ಎಂದಾಕ್ಷಣ ಕಡೆಗಣಿಸುವುದು ಬೇಡ ಎಂದು ಹೇಳಿದರು.
ಜ್ಞಾನ ಹೆಚ್ಚಿಸಿಕೊಳ್ಳಿ: ಇತ್ತೀಚೆಗೆ, ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳು ವಿಶೇಷ ಜ್ಞಾನ ಹೊಂದಿರುತ್ತಾರೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮರ್ಪಕವಾಗಿ ಬಳಸಿ, ಕಲೆಗೆ ಹೆಚ್ಚಿ ಮಹತ್ವ ನೀಡಬೇಕು. ರಾಜ್ಯದ ಪ್ರತಿಭಾವಂತ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡು ಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಕಲಾ ಉತ್ಸವದ ಮೆರವಣಿಗೆ ನಡೆಲಾಯಿತು. ಮೆರವಣಿಗೆಯಲ್ಲಿ ಎತ್ತಿಗಾಡಿ ಪ್ರದರ್ಶನ ಸೇರಿದಂತೆ ಹಿಂದಿನ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಐ.ಎಂ. ಮೋಹನ್, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಿ.ಜಿ. ಕೃಷ್ಣೇಗೌಡ, ಸಾಂಸ್ಕೃತಿಕ ವೇದಿಕೆಯ ಚನ್ನಬಸಪ್ಪ, ಉಪನ್ಯಾಸಕ ಎಚ್.ಡಿ. ಆನಂದ್, ಟಿ.ಪಿ. ಪುಟ್ಟರಾಜ್, ಸೋಮಶೇಖರ್, ಚಂದ್ರೇಗೌಡ, ಹಂಪನಹಳ್ಳಿ ತಿಮ್ಮೇಗೌಡ, ರಾಜಪ್ಪ, ಶಿವಣ್ಣ, ರಂಗಸ್ವಾಮಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement