ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪರಾಧಿ ಬಂಧನಕ್ಕೆ ಆಗ್ರಹ

Mainashree
Updated On : 20 Mar 2014, 12:19 pm

ಸಕಲೇಶಪುರ: ಗೃಹಿಣಿ ಆತ್ಮಹತ್ಯೆಗೆ ಕಾರಣವಾದ ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿ ಹೆತ್ತೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗೆ ನಡೆಯಿತು. ಕಳೆದ ಒಂದು ವಾರದ ಹಿಂದೆ ಹೆತ್ತೂರು ಗ್ರಾಮದ ದೇವರಬನ ಎಂಬಲ್ಲಿ ಅಶೋಕ ಎಂಬುವವರ ಪತ್ನಿ ದಿವ್ಯ (23) ಗಂಡನ ಅಕ್ರಮ ಸಂಬಂಧದಿಂದ ಬೇಸತ್ತು,   ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದರು. ಈ ಗೃಹಿಣಿ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಪತಿ ಅಶೋಕ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಯಸಳೂರು ಪೋಲಿಸರು ಪತಿಯನ್ನು ಬಂಧಿಸಿದ್ದರು. ಆದರೆ, ಮಂಗಳವಾರ ಪಾರ್ಥೀವ ಶರೀರವನ್ನು ಗ್ರಾಮಕ್ಕೆ ತಂದ ವೇಳೆ ಗ್ರಾಮಸ್ಥರು ಅಶೋಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು. ಕೊನೆಗೂ ಸ್ಥಳೀಯರ  ಪ್ರತಿಭಟನೆಗೆ ಮಣಿದ ಪೊಲೀಸರು ದಿವ್ಯ ಆತ್ಮಹತ್ಯೆಗೆ ಕಾರಣ ಎನ್ನಲಾದ ಮಹಿಳೆ ಸುಧಾ ಎಂಬಾಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement