ಚಿಣ್ಣರಿಂದ ಆರಾಧನಾ ಮಹೋತ್ಸವ
ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಪುರಂದರದಾಸರು ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಮಹೋತ್ಸವದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಸಂಗೀತ ಶಿಕ್ಷಕಿ ಪದ್ಮಶ್ರೀ ಅವರಿಂದ ಕಲಿತ ನೂರಾರು ಮಕ್ಕಳು ಪುರಂದರ ದಾಸರ ಹಾಗೂ ತ್ಯಾಗರಾಜರ ಕೀರ್ತನೆ ಹಾಡಿದರು.
ಸಂಸ್ಥೆಯ ಪ್ರಾಂಶುಪಾಲ ಸಿ.ಎಸ್.ಕೃಷ್ಣಸ್ವಾಮಿ ಮಾತನಾಡಿ, ಇಂಥ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಭಕ್ತಿ ಭಾವ ಹೆಚ್ಚುತ್ತದೆ. ಹಿಂದಿನ ಹರಿಕಾರರ ಸೇವೆ, ತ್ಯಾಗದ ಚರಿತ್ರೆಯನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
200ಕ್ಕೂ ಹೆಚ್ಚು ಮಕ್ಕಳು ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಶ್ರೀ ರಾಮಕೃಷ್ಣ ವಿದ್ಯಾಲಯದ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ, ಹೋಲಿ ಮದರ್ ಶಾಲೆಯ ಮುಖ್ಯ ಶಿಕ್ಷಕಿ ಶಾಂತ, ಸಹಶಿಕ್ಷಕರಾದ ಹರೀಶ್, ಉಮೇಶ್ ಇತರರು ಇದ್ದರು.