ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಜಗತ್ತಿಗೆ ಬೇಕಾದ ಜ್ಞಾನ ಸಂಸ್ಕೃತದಲ್ಲಿದೆ'

Mainashree
Updated On : 20 Mar 2014, 12:19 pm

ಹಾಸನ: ಜಗತ್ತಿಗೆ ಬೇಕಾದ ಜ್ಞಾನವೆಲ್ಲವೂ ಸಂಸ್ಕೃತದಲ್ಲಿ ಅಡಗಿದೆ. ಅಂತೆಯೇ ಜಗತ್ತಿನ ಮಹಾಸಂಶೋಧಕರು  ಸಂಸ್ಕೃತ ಕಲಿತು ಅಧ್ಯಯನ ಮಾಡಿ ಹೊಸದನ್ನು ನೀಡಬಲ್ಲವರಾದರು. ಸಂಸ್ಕೃತ ಅಧ್ಯಯಯನದಿಂದ ಭಾಷಾ ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಹಾಸನ ಸಂಸ್ಕೃತ ಸಂಘದ ಖಜಾಂಚಿ ಹಾಗೂ ಲೆಕ್ಕ ಪರಿಶೋಧಕ ಎಸ್.ಕೆ. ಸತ್ಯನಾರಾಯಣ ಹೇಳಿದರು.
ನಗರದ ಸಂಸ್ಕೃತ ಭವನದಲ್ಲಿ ಏರ್ಪಡಿಸಿದ್ದ ಸಂಸ್ಕೃತ ಪಾಠಶಾಲೆಯ 55ನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ಮೋಹನ್ ಮಾತನಾಡಿ, ಯೋಗ, ಸಂಗೀತ,ನೃತ್ಯಗಳು ಪಂಚಮ ವೇದಗಳು. ಅವುಗಳು ಭಾರತೀಯ ಅಧ್ಯಾತ್ಮ ಸಂಸ್ಕೃತಿಯ ಅಭ್ಯಾಸಗಳು. ಅಂಥ ಕಲೆಗಳಿಗೆ ಸಂಸ್ಕೃತ ಸಂಘ ಪ್ರೋತ್ಸಾಹ ನೀಡುತ್ತಿದೆ ಎಂದರು.
ಸಂಘದ ಕಾರ್ಯದರ್ಶಿ ಚಂದ್ರಕಾಂತ ಪಡೆಸೂರ್, ಶಿಕ್ಷಕರಾದ ಸರಸ್ವತಮ್ಮ, ಗಾಯತ್ರಿ, ಯೋಗ ಶಿಕ್ಷಕಿ  ವಿಶಾಲಾಕ್ಷಿ, ಸಂಗೀತ ಶಿಕ್ಷಕ ಎಚ್.ಎಸ್.ಕೃಷ್ಣಮೂರ್ತಿ, ಬಿ.ಎನ್.ಎಸ್. ಮುರಳಿ ಹಾಗೂ ನೃತ್ಯ ಶಿಕ್ಷಕಿ ಎಚ್.ಪಿ.ಉಷಾ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಮಕ್ಕಳಿಂದ ಸಂಸ್ಕೃತ ಸಂಭಾಷಣೆ, ಯೋಗ ಪ್ರದರ್ಶನ, ನೃತ್ಯ ಪ್ರದರ್ಶನ ಹಾಗೂ ಸಂಗೀತ ವಿಭಾಗದ ಮಕ್ಕಳಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು.  
ಭಾಗವಹಿಸಿದ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸಂಸ್ಕೃತ ಸಂಘದಿಂದ ಅಭಿನಂದನಾ ಪತ್ರಗಳನ್ನು ಹಾಸನದ ಎಸ್‌ಡಿಎಂ ಕಾಲೇಜಿನ ಉಪ ವೈದ್ಯಾಧಿಕಾರಿ ಡಾ. ಮುರಳೀಧರ್ ಪೂಜಾರ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement