ಅವರೇ ಟಿಕೆಟ್ ಕೊಡ್ತೀನಿ ಅಂದಿದ್ರು: ರೇಖಾ
ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪರವಾಗಿ ನಿಲ್ಲಲು ನಾನು ಟಿಕೆಟ್ ಕೇಳಿರಲಿಲ್ಲ. ನಿಮಗೆ ಟಿಕೆಟ್ ಕೊಡುತ್ತೇವೆ ಎಂದು ಪಕ್ಷದ ಮುಖಂಡರೇ ಹೇಳಿದ್ದರು. ಈಗ ವಿಜಯಶಂಕರ್ಗೆ ಟಿಕೆಟ್ ಕೊಡುತ್ತಾರಂತೆ. ಹೀಗೆ ನನ್ನನ್ನು ನಿರಾಸೆಗೊಳಿಸಬಾರದಿತ್ತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು- ಉಡುಪಿಯಿಂದ ಓರ್ವ ಮಹಿಳೆಗೆ ಟಿಕೆಟ್ ನೀಡಿದ್ದು, ನನಗೆ ಟಿಕೆಟ್ ನೀಡುವ ಮೂಲಕ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗುತ್ತದೆ ಎಂದು ಸಂತೋಷಪಟ್ಟಿದ್ದೆ. ಈಗ ನನಗೆ ಟಿಕೆಟ್ ಇಲ್ಲ ಎನ್ನಲಾಗುತ್ತಿದೆ. ಆದರೂ ನನಗಿನ್ನೂ ಟಿಕೆಟ್ ಸಿಗುವ ನಂಬಿಕೆ ಇದೆ ಎಂದರು.