ಚುನಾವಣಾ ವೆಚ್ಚ ವೀಕ್ಷಕರ ಆಗಮನ
ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರಕ್ಕೆ ಇಬ್ಬರು ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಈ ಇಬ್ಬರು ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ ವರದಿ ಮಾಡಿಕೊಂಡಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ಕಿಟ್ಟಿಜಾನ್ ಮತ್ತು ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಕಡೂರು, ಕ್ಷೇತ್ರಗಳ ವೆಚ್ಚ ವೀಕ್ಷಕರಾಗಿ ಈಶ್ವರ ರೆಡ್ಡಿ, ಕಾರ್ಯ ನಿರ್ವಹಿಸಲಿದ್ದಾರೆ. ಈ ವೆಚ್ಚ ವೀಕ್ಷಕರಿಗೆ ಲೈಸನ್ಸಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಿಟ್ಟಿಜಾನ್ ಅವರ ನೆರವಿಗಾಗಿ ಬೇಲೂರಿನ ಪಶು ವೈದ್ಯಾಧಿಕಾರಿ ಡಾ. ಸಂತೋಷ ದೂರವಾಣಿ ಸಂಖ್ಯೆ: 9740293003 ಮತ್ತು ಈಶ್ವರರೆಡ್ಡಿ ಅವರ ನೆರವಿಗಾಗಿ ತೋಟಗಾರಿಕೆ ಇಲಾಖೆಯ ಅರಸೀಕೆರೆಯ ಸಹಾಯಕ ನಿರ್ದೇಶಕರಾದ ರಘು ಅವರನ್ನು ದೂರವಾಣಿ ಸಂಖ್ಯೆ. 9900116060 ನೇಮಿಸಲಾಗಿದೆ. ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದಲ್ಲಿ ಈ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.