ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪತಿಯನ್ನು ಕೊಲೆಗೈದ ಪತ್ನಿ

Mainashree
Updated On : 20 Mar 2014, 10:21 am

ಹಾಸನ: ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ದುರ್ಘಟನೆ ತಾಲೂಕಿನ ಸಾಲಗಾಮೆ ಹೋಬಳಿ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ.
ಆ ಗ್ರಾಮದ ಸೋಮಶೇಖರ್ (36) ಪತ್ನಿಯಿಂದ ಹತನಾದ ವ್ಯಕ್ತಿ. ಪತಿಯನ್ನು ಕೊಲೆ ಮಾಡಿದ ಶಶಿಕಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಶಶಿಕಲಾ, ಬುಧವಾರ ರಾತ್ರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ನಂತರ ಮನೆಯಲ್ಲೇ ನೇಣು ಹಾಕಿದ್ದರು. ಈ ವಿಷಯ ತಿಳಿದ ಜನರು ಮನೆಗೆ ಹೋಗಿ ಶವ ನೋಡಿದಾಗ ಸೋಮಶೇಖರನ ಮೈ ಮೇಲೆ ತೀವ್ರ ಗಾಯಗಳಾಗಿರುವ ಗುರುತು ಪತ್ತೆಯಾದವು.
ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಸ್ಥಳಕ್ಕೆ ಭೇಟಿ ಹೆಚ್ಚುವರಿ ಎಸ್ಪಿ ರಶ್ಮಿ ಶಂಕರೇಗೌಡ, ಗ್ರಾಮಾಂತರ ಠಾಣೆ ಇನ್ಸೆಪೆಕ್ಟರ್ ವೀರೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತನಿಗೆ 10 ವರ್ಷದ ಪುತ್ರ ಮತ್ತು 6 ವರ್ಷದ ಪುತ್ರಿ ಇದ್ದಾಳೆ.
ಕಾರಣವೇನು? :  ಕೊಲೆಯಾದ ಸೋಮಶೇಖರ್ ದೂರದ ಪುನಾದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ, ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದ. ಈ ಸಮಯದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆರೋಪಿ ಶಶಿಕಲಾ ಬೇರೆ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement