ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಡಿಯೂರಪ್ಪ ಪರ ವೀರಶೈವ ಸಮುದಾಯವಿಲ್ಲ

Mainashree
Updated On : 20 Mar 2014, 9:50 am

ಸಕಲೇಶಪುರ: ವಿಶ್ವಾಸ ಹಾಗೂ ನಂಬಿಕೆ ಉಳಿಸಿಕೊಳ್ಳದ ಯಡಿಯೂರಪ್ಪನವರ ಹಿಂದೆ ವೀರಶೈವ ಸಮೂದಾಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಬಿ.ಬಿ. ಶಿವಪ್ಪ ಹೇಳಿದ್ದಾರೆ.
ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ವೀರಶೈವರಿಗೆ ಸತತ ಅನ್ಯಾಯವಾಗಿದ್ದು, 1972ರಲ್ಲಿ ನಿಜಲಿಂಗಪ್ಪನವರಿಗೆ ಕಿರುಕುಳ ನೀಡಿ ದೂರದ ಬಾಗಲಕೋಟೆ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವಂತೆ ಮಾಡಿದ್ದ ನಾಯಕರು ಇದೆ ರೀತಿಯಲ್ಲಿ ವೀರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಯಿಗೂ ಕಿರುಕುಳ ನೀಡಿದ್ದರು. ಇದನ್ನೆಲ್ಲ ಕಂಡಿದ್ದ ವೀರಶೈವ ಜನಾಂಗ 2007ರಲ್ಲಿ ಕುಮಾರಸ್ವಾಮಿ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಪರಿಣಾಮ ಯಡಿಯೂರಪ್ಪನವರನ್ನು ಬೆಂಬಲಿಸಿತ್ತು. ಆದರೆ, ಈ ಸಮೂದಾಯವನ್ನು ವಿಶ್ವಾಸಕ್ಕೆ ಪಡೆಯದೆ ಪಕ್ಷ ಬಿಟ್ಟು ಮತ್ತೆ ಪಕ್ಷ ಸೇರಿರುವುದಲ್ಲದೇ ವೀರಶೈವ ಸಮೂದಾಯದ ಮುಖಂಡರನ್ನೇ ತುಳಿಯುವ ಮನೋಭಾವ ಇರುವ ಯಡಿಯೂರಪ್ಪನವರಿಗೆ ವೀರಶೈವರ ಬೆಂಬಲ ಈಗ ಉಳಿದಿಲ್ಲ ಎಂದರು.

ಗ್ರೀನ್ ಹಾರ್ಟ್‌ನಿಂದ ರಕ್ತ ಗುಂಪು ಉಚಿತ ತಪಾಸಣೆ
ಜಾವಗಲ್: ಗ್ರೀನ್ ಹಾರ್ಟ್ ಡ್ರೀಮ್ ಫೌಂಡೇಶನ್ ವತಿಯಿಂದ ಹಿರಿಯೂರು ಶ್ರೀಹಾಲ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ಗುಂಪು ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು.
ಫೌಂಡೇಶನ್ ಅಧ್ಯಕ್ಷ ಕೆ.ಆರ್. ಲೋಕೇಶ್ ಮಾತನಾಡಿ, ರಕ್ತದ ಮಹತ್ವ ಉಪಯೋಗ ಹಾಗೂ ಆರೋಗ್ಯದ ಬಗ್ಗೆ ಸದಾ ಜಾಗೃತಿಯಾಗಿರಬೇಕು. ರಕ್ತದಾನದಿಂದ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಸಾಂಕ್ರಾಮಿಕ ರೋಗಗಳು, ಹರಡುವಿಕೆ, ಅದನ್ನು ತಡೆಗಟ್ಟುವ ಬಗ್ಗೆ ಮತ್ತು ಗ್ರಾಮಗಳ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.  ಕಾರ್ಯದರ್ಶಿ ಕಿರಣ್ ಕುಮಾರ್, ಬೇಲೂರು ತಾಲೂಕು ಕರವೇ ಘಟಕದ ಭಾನುಪ್ರಕಾಶ್, ಉದ್ಯಮಿ ಕಾಡಪ್ಪ ಕೃಷ್ಣಪ್ಪ ಮಾತನಾಡಿದರು. ಶಾಲೆಯ ಶಿಕ್ಷಕ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement