ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಕ್ಕಿಬಿದ್ದ 'ಚಿನ್ನ'ದ ಕಳ್ಳ: ಲಕ್ಷಾಂತರ ಮೌಲ್ಯದ ಒಡವೆ ವಶ

Mainashree
Updated On : 20 Mar 2014, 10:21 am

ಅರಸೀಕೆರೆ:  ಬಿಟಿಎಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ರು. 14 ಲಕ್ಷಗೂ ಹೆಚ್ಚು ಬೆಲೆ ಬಾಳುವ 470 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿ, ಆತನಿಂದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ, ತಮ್ಮ ಜಾಣ್ಮೆ ಹಾಗೂ ಸಾಹಸ ತೋರಿರುವ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಸಸ್ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣ ಬಯಲಾಗಿದೆ.
ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿ ಗಂಗಯ್ಯ ಎಂಬುವವರ ಮಗ ಲಕ್ಷ್ಮಣ್ ಬಂಧಿತ ಆರೋಪಿ. ಈತನೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ರಾಮೋಜಿ ತಲೆತಪ್ಪಿಸಿಕೊಂಡಿದ್ದಾನೆ.
ಈ ಇಬ್ಬರು ಬೆಂಗಳೂರಿನ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಮ್ಮ ಮತ್ತು ಅವರ ಸಹೋದರಿ ಬ್ಯಾಗಿನಲ್ಲಿದ್ದ 470.1 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳವು ಮಾಡಿದ ವಡವೆಗಳನ್ನು ಆರೋಪಿಗಳನ್ನು ಬೆಂಗಳೂರಿನ ಕೊಟ್ಟಿಗೆ ಪಾಳ್ಯದ ಐಐಎಫ್ ಲೈನ್ ಫೈನಾನ್ಸಿನಲ್ಲಿ 226 ಗ್ರಾಂ. ಚಿನ್ನದ ವಡವೆಗಳು ಮತ್ತು ಪೀಣ್ಯ ಕಾರ್ವೆ ಫೈನಾನ್ಸ್‌ನಲ್ಲಿ 244.1 ಗಿರವಿ ಇಟ್ಟಿದ್ದು, ಆರೋಪಿಯ ಮಾಹಿತಿ ಮೇರೆಗೆ ಈ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು ಅಂದಾಜು ಬೆಲೆ ರು. 14,10,300ಗಳಾಗಿರುತ್ತದೆ ಎಂದು ವಿವರಿಸಿದರು.
ಅರಸೀಕೆರೆ ಡಿವೈಎಸ್ಪಿ ಮಂಜುನಾಥ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ನಂದಕುಮಾರ್, ಪಿಎಸ್‌ಐ ಅಯ್ಯಣ್ಣಗೌಡ, ಎಎಸ್‌ಐ ತಿಮ್ಮಪ್ಪ ಸಿಬ್ಬಂದಿ ಹಿರಾಸಿಂಗ್, ತ್ರಿಮೂರ್ತಿ, ಜಗನ್ನಾಥ್ ಅವರುಳ್ಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಆರಕ್ಷಕರಿಗೆ ಮನೆ ಮಂಜೂರು: ಎಸ್‌ಪಿ
ಪೊಲೀಸರಿಗೆ 42 ಮನೆಗಳು ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು. ಮುಂದಿನ 3 ವರ್ಷಗಳಲ್ಲಿ ಪ್ರತಿಠಾಣೆ ಹಾಗೂ ಉಪಠಾಣೆಗಳಲ್ಲಿ ಖಾಲಿ ಇರುವ ಪೊಲೀಸ್ ಕಟ್ಟಡ ಹಾಗೂ ವಸತಿ ಗೃಹಗಳನ್ನು ಸಂಪೂರ್ಣವಾಗಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement