ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾನಾ ಇಲಾಖೆ ನೌಕರರಿಂದ ಮತದಾನ ಜಾಗೃತಿ ಜಾಥಾ

Mainashree
Updated On : 21 Mar 2014, 11:40 am

ಬೇಲೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಕುರಿತು ಎಲ್ಲ ಮತದಾರರಲ್ಲಿ ಜಾಗೃತಿ ಮೂಡಿಸಲು ನಾನಾ ಇಲಾಖೆಯ ನೌಕರರು ಪಟ್ಟಣದ ಮುಖ್ಯರಸ್ತೆಯಲ್ಲಿ  ಶುಕ್ರವಾರ ಜಾಥಾ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸಲು ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು, ಆರೋಗ್ಯ ಇಲಾಖೆಯ ಎಎನ್ಎಂಗಳು, ಗ್ರಾಪಂ ಸಿಬ್ಬಂದಿ, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು, ಮತ್ತು ಸಿಬ್ಬಂದಿ, ಸ್ಥಳೀಯವಾಗಿ ಕೆಲಸ ಮಾಡುವ ಸರ್ಕಾರಿ ನೌಕರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಗ್ರಾಪಂ ವ್ಯಾಪ್ತಿಯಲ್ಲಿ ಜಾಥಾ ನಡೆಸಲು ವೇಳಾಪಟ್ಟಿ ರಚಿಸಲಾಗಿದ್ದು ಮಾ. 25ರಿಂದ ಏ.7ರವರೆಗೆ ಹಲವೆಡೆ ಜಾಥಾ ನಡೆಯಲಿದೆ. ಮಾ.25ರಂದು ಅಡಗೂರು, ಆದಂಲೆ, ಅನುಘಟ್ಟ, 26- ಅರೇಹಳ್ಳಿ, ಬಂಟೇನಹಳ್ಳಿ, ಬಿಕ್ಕೋಡು, 27- ಚಟಚಟನಹಳ್ಳಿ, ಚೀಕನಹಳ್ಳಿ, ಚಿಕ್ಕಮೇದೂರು, ದಬ್ಬೆ, 28- ಗಂಗೂರು, ಘಟ್ಟದಹಳ್ಳಿ, ಗೋಣಿಸೋಮನಹಳ್ಳಿ,  29- ಹಗರೆ, ಹನಿಕೆ, ಹೆಬ್ಬಾಳು, ಏ.1 - ಹುನುಗನಹಳ್ಳಿ, ಇಬ್ಬೀಡು, 2- ಕಳ್ಳೇರಿ, ಕೆಸಗೋಡು, ಕೋಡಿಹಳ್ಳಿ, ಕೋಗಿಲೆಮನೆ, ಏ- 3 ಕುಶಾವರ, ಲಕ್ಕುಂದ, ಮದಘಟ್ಟ, 4- ಮಲಸಾವಿರ, ನಾರಾಯಣಪುರ, ನಾರ್ವೆಪೇಟೆ, 5 - ರಾಜನಸಿರಿಯೂರು, ಸನ್ಯಾಸಿಹಳ್ಳಿ, ಸಾವಿಸಿಹಳ್ಳಿ, ತೊಳಲು, 7- ತುಂಬದೇವನಹಳ್ಳಿ, ಯಲಹಂಕ, ಯಮಸಂದಿಯಲ್ಲಿ ನಡೆಯಲಿದೆ.
ಶುಕ್ರವಾರ ಜಾಥಾ ನಡೆಸುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡದೆ, ಸ್ಥಳಿಯ ಪತ್ರಕರ್ತರಿಗೂ ಮಾಹಿತಿ ನೀಡದೆ ಏಕಾಏಕಿ ಮುಖ್ಯರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.   ಯಾವ ವಿಚಾರಕ್ಕೆ ಜಾಥಾ ನಡೆಸುತ್ತಿದ್ದಾರೆ ಎಂಬುದೇ ಯಾರಿಗೂ ತಿಳಿಯದಾಗಿತ್ತು. ಆಶಾ ಕಾರ್ಯಕರ್ತೆಯರು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಯಾವುದೋ ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಒತ್ತಾಯಿಸಿ ಮೆರವಣಿಗೆ ಹೊರಟಿದ್ದಾರೆ ಎಂಬುದು ಕೆಲವರ ಅನಿಸಿಕೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement