ಪುರಸಭೆ ಅಧ್ಯಕ್ಷರಿಗೆ ರಕ್ಷಣಾ ವೇದಿಕೆ ಅಭಿನಂದನೆ
ಬೇಲೂರು: ಬೇಲೂರು ಪುರಸಭಾ ನೂತನ ಅಧ್ಯಕ್ಷರಾಗಿ ಅಯ್ಕೆಗೊಂಡ ಬಿ.ಗಿರೀಶ್ ಅವರಿಗೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ, ಕರವೇ ಅಧ್ಯಕ್ಷ ಚಂದ್ರಶೇಖರ್ ಬೇಲೂರು ಪಟ್ಟಣ ವಿಶ್ವಪ್ರಸಿದ್ಧಿ ತಾಣವಾಗಿದ್ದು, ಪ್ರತಿ ನಿತ್ಯ ನೂರಾರು ಪ್ರವಾಸಿಗರು ದೇಶ-ವಿದೇಶದಿಂದ ಬಂದು ಹೋಗುವ ಪಟ್ಟಣದಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಪಟ್ಟಣದ ಯುಜಿಡಿ, ಒಳಚರಂಡಿ, ರಸ್ತೆ, ಪುಟ್ಫಾತ್ ವ್ಯಾಪಾರಿಗಳ ಹತ್ತುಹಲವು ಸಮಸ್ಯೆಗಳ ಬಗ್ಗೆ ನೂತನ ಅಧ್ಯಕ್ಷರು ಸೂಕ್ತ ಗಮನ ಹರಿಸಬೇಕು ಎಂದರು.
ಕರವೇ ಪ್ರಧಾನ ಕಾರ್ಯದರ್ಶಿ ಖಾದರ್, ನಗರ ಉಪಾಧ್ಯಕ್ಷ ರೋಮಿಸಜಾದ್, ಕುಮಾರ್, ನಿಂಗರಾಜು ಇದ್ದರು.