ಅನುದಾನ ಅಭಾವ ಜೀರ್ಣೋದ್ಧಾರ ಸ್ಥಗಿತ
ಅರಸೀಕೆರೆ: ದೇವಾಲಯದ ಮೇಲೆ ಅರಳಿ ಗಿಡ ಬೆಳೆದ ಪರಿಣಾಮ ದೇವಾಲಯ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡು ಕುಸಿಯುವ ಹಂತ ತಲುಪಿತ್ತು. ಇದನ್ನು ಮ ನಗಂಡ ಸಂಕೋಡನಹಳ್ಳಿಯ ಗ್ರಾಮಸ್ಥರು ಹಾಗೂ ಮುಖಂಡರು ದೇವಾಲಯ ಜೀರ್ಣೋದ್ಧಾರಕ್ಕೆ ಪಣ ತೊಟ್ಟಿದ್ದರು. ಗ್ರಾಮದ ಪುರಾತನ ಪುರಾಣ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇವಾಲಯವೇ ಇದಾಗಿದ್ದು ಶತಮಾನಗಳ ಇತಿಹಾಸ ಹೊಂದಿದೆ. ಆದರೆ ಅನುದಾನದ ಕೊರತೆಯಿಂದಾಗಿ ಜೀಣೋದ್ಧಾರ ಕಾಮಗಾರಿ ಸ್ಥಗಿತಗೊಂಡಿದೆ.
ಶಿಥಿಲಗೊಳಿಸಿದ ಅರಳೀ ಗಿಡ: ಗ್ರಾಮಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಎದುರಾಗುವ ದೇವಾಲಯ ಇದಾಗಿದ್ದು, ಇಂತಹ ಬೃಹತ್ ದೇವಸ್ಥಾನದ ಮೇಲೆ ದೊಡ್ಡ ಅರಳಿ ಗಿಡವೊಂದು ಬೆಳೆದಿತ್ತು. ಗಿಡದ ಬೇರುಗಳು ದೇವಾಲಯವನ್ನು ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಳ್ಳುವಂತೆ ಮಾಡಿದ್ದವು. ಇದನ್ನು ಅರಿತ ಗ್ರಾಮಸ್ಥರು ಅರಳಿಗಿಡ ತೆರವುಗೊಳಿಸಿ ದೇವಾಲಯಕ್ಕೆ ಹೊಸ ರೂಪ ನೀಡುವ ಚಿಂತನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲು ಪಣತೊಟ್ಟಿದ್ದರು.