ಅಪರಿಚಿತ ಶವ ಪತ್ತೆ
ಹಿರೀಸಾವೆ: ಇಲ್ಲಿಗೆ ಸಮೀಪದ ತೋಟದಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ಬಿಳಿ ಮಾಸಲು ಬಣ್ಣದ ಅಂಗಿ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಬೆಳಗ್ಗೆಯಿಂದ ಮದ್ಯಪಾನ ಮಾಡಿಕೊಂಡು ಮುದ್ರೇಕಲ್ಲು ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀನಿವಾಸ ಎಂಬುವರ ತೋಟದ ಬಳಿ ಸುತ್ತಾಡುತ್ತಿದ್ದುದನ್ನು ನೋಡಿರುವುದಾಗಿ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ದೇಹವನ್ನು ಹಿರೀಸಾವೆ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.