ಆಟೋ ರಿಕ್ಷಾ ಡಿಕ್ಕಿ; ಪಾದಚಾರಿ ಸಾವು
ಹಾಸನ: ಆಟೋರಿಕ್ಷಾವೊಂದು ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ, ಪಾದಚಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೇಲೂರು ತಾಲ್ಲೂಕಿನ ರಂಗಮಂದಿರ ಬೀದಿ ಅರೇಹಳ್ಳಿ ವಾಸಿ ಪ್ರಕಾಶ್ (55) ಸಾವನ್ನಪ್ಪಿದ ದುರ್ದೈವಿ.
ಪ್ರಕಾಶ್ ಅವರು ಪತ್ನಿ ಲಲಿತಮ್ಮನೊಂದಿಗೆ ಸಂಬಧಿಕರ ಶವ ಸಂಸ್ಕಾರಕ್ಕೆ ಚನ್ನರಾಯಪಟ್ಟಣಕ್ಕೆ ಬಂದಿದ್ದು, ಪ್ರಕಾಶ್ ಅವರು ಸ್ನೇಹಿತರೊಂದಿಗೆ ಕಾಫಿ ಕುಡಿದು ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆ ಭುವನೇಶ್ವರಿ ವೃತ್ತದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯತೆಯಿಂದ ಪ್ರಕಾಶ್ಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪ್ರಕಾಶ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಪತ್ನಿ ಲಲಿತಮ್ಮ ಅವರು ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಟ್ಕಾ: 21 ಜನರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 20 ಮಂದಿಯನ್ನು ಬಂಧಿಸುವರುವ ಘಟನೆ ನಡೆದಿದೆ.
ಹಾಸನ ಶಿವಜ್ಯೋತಿನಗರ ಕಲ್ಯಾಣ ಮಂಟಪದ ಹತ್ತಿವಿರುವ ಈಶ್ವರಿ ವೈನ್ಸ್ ಮುಂದೆ ಖಾಲಿ ಮೈದಾನದ ಬೇಲಿ ಮರೆಯಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ನಗರದ ಠಾಣೆಯ ಇನ್ಸ್ಪೆಕ್ಟರ್ ಎಚ್.ಬಿ. ಸಂಜೀವೇಗೌಡ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ದಿನೇಶ್ (32), ಮಂಜ (52), ಪ್ರಶಾಂತ್ (26) ಮತ್ತು ಸ್ವಾಮಿ ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 4,320 ನಗದನ್ನು ವಶಪಡಿಸಿಕೊಂಡು, ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರಾಜಘಟ್ಟಕ್ಕೆ ಹೋಗುವ ಕ್ರಾಸ್ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ-ಜೂಜಾಟಾಡುತ್ತಿದ್ದಾಗ ಬಡಾವಣೆ ಠಾಣೆಯ ಪಿಎಸ್ಐ ನರೇಂದ್ರಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಟ್ಕಾ- ಜೂಜಾಡುತ್ತಿದ್ದ ರಘು (32) ಎಂಬವನನ್ನು ಬಂಧಿಸಿದ್ದು, ಮಟ್ಕಾ- ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 930 ನಗದನ್ನು ವಶಪಡಿಸಿಕೊಂಡು ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಹೊಳೆನರಸೀಪುರ ಪಟ್ಟಣದ ಸುಬಾಷ್ ವೃತ್ತದ ಸಮೀಪ ಸಾರ್ವಜನಿಕರ ಸ್ಥಳದಲ್ಲಿ ಭಾರತ- ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟಿಕೊಂಡು ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪಟ್ಟಣ ಠಾಣೆಯ ಪಿಎಸ್ಐ ಶಿವಕುಮಾರ್ ಹಾಗೂ ಸಿಬ್ಬಂದಿ ರಕ್ಷಿತ್, ಅತೀಕ್ (30), ದೀಪಕ್ (25), ಸಾದಿಕ್ (27) ಮತ್ತು ದಿನೇಶ್ (40) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 6,000 ನಗದನ್ನು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಅರಸೀಕೆರೆ ನಗರ ಠಾಣೆ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಪಟ್ಟಣದ ರೇಲ್ವೆ ಸ್ಟೇಷನ್ ಹಿಂಭಾಗದ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿ ಅಕ್ರಂ (38), ನಂದ (37), ಮಧು (25), ಶಶಿಧರ್ (32) ಮತ್ತ ಕಾರ್ತಿಕ್ (24) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 26,200 ರು.ನಗದನ್ನು ವಶಪಡಿಸಿಕೊಂಡು, ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ, ಹೊನ್ನಕುಮಾರನಹಳ್ಳಿ ಗ್ರಾಮದ ಸತೀಶ್ ಅವರ ಕೊಟ್ಟಿಗೆ ಮನೆಯಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಸವರಾಜು (41), ಸ್ವಾಮಿ (35), ನಾಗರಾಜು (36), ಮೂರ್ತಿ (38), ವಾಸು ಎಂಬವರನ್ನು ಬಂಧಿಸಿದ್ದು, ರು. 4,100 ನಗದನ್ನು ವಶಪಡಿಸಿಕೊಂಡಿದ್ದು, ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಹಾಸನದ ಪೃಥ್ವಿ ಟ್ಯಾಕೀಸ್ ಕಾಂಪೌಂಡ್ ಮುಂಭಾಗದಲ್ಲಿ ಅಕ್ರಮವಾಗಿ ಮಟ್ಕಾ-ಜೂಜಾಟಾಡುತ್ತಿದ್ದಾಗ ಪಿಎಸ್ಐ ನರೇಂದ್ರಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ರಾಜು (60) ಎಂಬವರನ್ನು ಬಂಧಿಸಿದ್ದು, ಮಟ್ಕಾ-ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 280 ನಗದನ್ನು ವಳಪಡಿಸಿಕೊಂಡಿದ್ದು, ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಕ್ರಮ ಮದ್ಯ: ಒಬ್ಬನ ಬಂಧನ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ, ಬಂಡೀಲಕ್ಕನಕೊಪ್ಪಲು ವಾಸಿ ನಾಗರಾಜುನಾಯಕ್ (28) ಅವರ ಮನೆಯ ಪೆಟ್ಟಿಗೆ ಅಂಗಡಿ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾಗ ಹಳೇಬೀಡು ಪೊಲೀಸರು ದಾಳಿ ನಡೆಸಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ್ದು, ಸುಮಾರು ರು. 2868 ಬೆಲೆಯ 180 ಎಂಎಲ್ನ ಓಲ್ಡ್ ಅಡ್ಮಿರಲ್ ಬ್ರಾಂದಿಯ 9 ಸಾಚೆಟ್ಗಳು, 180 ಎಂಎಲ್ನ ಓಲ್ಡ್ ವರೀನ್ ವಿಸ್ಕಿ 7 ಸಾಚೆಟ್ಗಳು, 180 ಎಂಎಲ್ನ ಮ್ಯಾಕ್ಡೊಲ್ಡ್ ವಿಸ್ಕಿಯ 3 ಸಾಚೆಟ್ಗಳು, 90 ಎಂಎಲ್ನ ಓರಿಜಿನಲ್ ಚಾಯ್ಸ್ ವಿಸ್ಕಿಯ 58 ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿದ್ದಾರೆ.