ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇತಿಹಾಸ ಈಗ ನಿರಾಸಕ್ತಿಯ ವಿಷಯ: ಪ್ರೊ. ನೈಮತ್ ವಿಷಾದ

Rashmi Kasaragodu
Updated On : 23 Mar 2014, 11:59 am

ಹೊಳೆನರಸೀಪುರ: ಇತಿಹಾಸ ವಿಷಯವು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ನಿರಾಸಕ್ತಿಯ ವಿಷಯವಾಗುತ್ತಿದ್ದು, ಈ ವಿಷಯ ಕೇವಲ ಪರೀಕ್ಷೆಗೆ ಮಾತ್ರವೇ ಸೀಮಿತವಾಗುತ್ತಿದೆ ಎಂದು ಗೊರೂರು ಎಎನ್‌ವಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ನೈಮತ್ ಉಲ್ಲಾ ಷರೀಫ್ ವಿಷಾದಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ತೀವ್ರಗಾಮಿಗಳು ಮತ್ತು ಕ್ರಾಂತಿಕಾರಿಗಳ ಪಾತ್ರ ಎಂಬ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದೆ ಗಾಂಧಿ ಯಾರೆನ್ನಬಹುದು: ಪ್ರಧಾನ ಭಾಷಣ ಮಾಡಿದ ಮೈಸೂರಿನ ಜೆಎಸ್‌ಎಸ್ ಕಲಾ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪರಮೇಶ್ವರ್ ಮಾತನಾಡಿ, ಇತಿಹಾಸದ ಅಧ್ಯಯನದ ಬಗೆಗಿನ ನಿರಾಸಕ್ತಿ, ಮುಂದೊಂದು ದಿನ ಗಾಂಧೀಜಿ ಎನ್ನುವಂತೆ ಮಾಡಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಣ್ಣ ವಹಿಸಿದ್ದರು.  ಪ್ರೊ. ಚಂದ್ರಕುಮಾರ್, ಉಪನ್ಯಾಸಕರಾದ  ಅಶೋಕ್, ಜಿ.ಜಿ. ರಾಜಶೇಖರ್, ಶಿವರಾಮೇಗೌಡ, ಸುನಿತ, ಅನಂತ್  ಇತರರು ಇದ್ದರು.  ಟಿ.ವೈ. ಪಲ್ಲವಿ ಪ್ರಾರ್ಥಿಸಿ, ಅಶ್ವಿನಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement