ಗೃಹಿಣಿ ಸೇರಿ ಮೂವರು ನಾಪತ್ತೆ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಮೂವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಅರಸೀಕೆರೆ ಪಟ್ಟಣದ ಜೇನುಕಲ್ಲು ನಗರ ವಾಸಿ ಲೀಲಾ ಅವರು ಮಕ್ಕಳಿಲ್ಲದ ಕಾರಣ ಈಗ್ಗೆ 8 ವರ್ಷಗಳಿಂದ ಅಣ್ಣನ ಮಗನಾದ ನಾಗೇಂದ್ರಕುಮಾರ್ (14)ನನ್ನು ಸಾಕಿಕೊಂಡಿದ್ದು, ಅರಸೀಕೆರೆ ಪಟ್ಟಣದ ಬಸವರಾಜೇಂದ್ರ ಡೆಮಾನ್‌ಸ್ಟೇಷನ್ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡಿಕೊಂಡಿದ್ದ. ಎಂದಿನಂತೆ ಶಾಲೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಇದುವೆರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
ಚಹರೆ: 4 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಹಸಿರು ಪ್ಯಾಂಟ್ ಧರಿಸಿರುತ್ತಾನೆ. ಅತ್ತೆ ಲೀಲಾ ಅವರು ಅರಸೀಕೆರೆ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಶಿಲ್ಪಾ ಕಾಣೆ: ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಎಂ. ಕೊಪ್ಪಲು ಗ್ರಾಮದ ರಮೇಶ ರವರ ಪತ್ನಿ ಶಿಲ್ಪ (26) ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5.3 ಅಡಿ ಎತ್ತರ, ಸಾದಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾಳೆ. ಪತಿ ರಮೇಶ ರವರು ಜಾವಗಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜ್ಯೋತಿ ನಾಪತ್ತೆ: ಇನ್ನೊಂದು ಪ್ರಕರಣದಲ್ಲಿ ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ, ಜಯಂತಿನಗರ ಗ್ರಾಮ ವಾಸಿ ಚಂದ್ರಶೇಖರಯ್ಯರವರ ಪತ್ನಿ ಎಚ್.ಆರ್. ಜ್ಯೋತಿ (34) ಎಂಬವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಪತಿ ಚಂದ್ರಶೇಖರಯ್ಯ ಅವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.